ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲ್ ಬ್ಯಾಡ್ಮಿಂಟನ್‌: ಬಿಜಿಎಸ್‌ ತಂಡ ರಾಜ್ಯಮಟ್ಟಕ್ಕೆ

Published 6 ನವೆಂಬರ್ 2023, 6:42 IST
Last Updated 6 ನವೆಂಬರ್ 2023, 6:42 IST
ಅಕ್ಷರ ಗಾತ್ರ

ಮಾಗಡಿ: ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜು ಕ್ರೀಡಾಕೂಟದ ಬಾಲ್‌ ಬ್ಯಾಡ್ಮಿಂಟನ್‌ನಲ್ಲಿ ಜಯಗಳಿಸಿದ ಬಿಜಿಎಸ್ ಪದವಿ ಪೂರ್ವ ಕಾಲೇಜಿನ ಬಾಲಕಿಯರ ಮತ್ತು ಬಾಲಕರ ತಂಡಗಳು ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿವೆ. 

ರಕ್ಷಿತ ಎಚ್‌.ಪಿ. 100 ಮೀಟರ್‌ ಓಟದಲ್ಲಿ ಮತ್ತು ಗುಂಡು ಎಸೆತದಲ್ಲಿ ಪ್ರಥಮ ಹಾಗೂ ಉದ್ದ ಜಿಗಿತದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ.

ಯಶಸ್ವಿನಿ–ತಟ್ಟೆ ಎಸೆತದಲ್ಲಿ ಪ್ರಥಮ, ನಿವೇದಿತ ಎನ್‌.ರಾಜ್‌– ಚೆಸ್‌ ನಲ್ಲಿ ಪ್ರಥಮ, ಗಗನ್‌ ಗುಂಡು ಎಸೆತದಲ್ಲಿ ದ್ವಿತಿಯ, ಸೈಯದ್‌–ಕುಸ್ತಿಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.

ಗಾನವಿ, ಚೈತ್ರ, ಅಮೃತ, ಗಗನ, ಚಿನ್ಮಯಿ, ತ್ರಿಷ, ಲಾವಣ್ಯ, ಬೇಬಿ ಅವರ ಬಾಲ್‌ ಬ್ಯಾಡ್ಮಿಂಟನ್‌ ತಂಡದಲ್ಲಿದ್ದರು. ದರ್ಶನ,ವರುಣ್‌, ನಿತೀಶ್‌, ಉದಯ ಶೆಟ್ಟಿ, ಭರತ, ಕುಶಾಲ್‌,ಕೆ, ಮೋಹನ್‌, ಭೈರೇಶ್‌ ಬ್ಯಾಡ್ಮಿಂಟನ್‌ ಬಾಲಕರ ತಂಡದಲ್ಲಿದ್ದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT