ಶುಕ್ರವಾರ, 21 ನವೆಂಬರ್ 2025
×
ADVERTISEMENT
ADVERTISEMENT

ಬಿಡದಿ | ಏಳಿಗೆ ಸಹಿಸದೆ ಸುಳ್ಳು ಆರೋಪ: ಉಮೇಶ್

Published : 21 ನವೆಂಬರ್ 2025, 6:35 IST
Last Updated : 21 ನವೆಂಬರ್ 2025, 6:35 IST
ಫಾಲೋ ಮಾಡಿ
Comments
‘ವೇತನ ಬಿಡುಗಡೆ ಮಾಡಿಸಲು ಹಲವರಿಗೆ ಹಣ ಕೊಟ್ಟಿರುವೆ’
‘ಒಂಬತ್ತು ವರ್ಷಗಳಿಂದ ಕಾರ್ಮಿಕ ಕೋರ್ಟ್‌ ಮತ್ತು ಸಂಬಂಧಪಟ್ಟ ಇಲಾಖೆಗಳಿಗೆ ನಾನು ಅಲೆದಿದ್ದರಿಂದ ನೌಕರರ ಬಾಕಿ ವೇತನ ಬಿಡುಗಡೆಯಾಗಿದೆ. ಅದಕ್ಕಾಗಿ ಸುಮಾರು ₹9 ಲಕ್ಷ ಖರ್ಚಾಗಿದ್ದು ಹಲವರಿಗೆ ಹಣ ಕೊಟ್ಟಿದ್ದೇನೆ. ಅವರ ಹೆಸರನ್ನು ನಾನಿಲ್ಲಿ ಹೇಳಲಾಗದು. ನನ್ನ ಶ್ರಮಕ್ಕಾಗಿ ನೌಕರರೇ ಮಾತನಾಡಿಕೊಂಡು ನನಗೆ ಹಣ ಕೊಡಲು ಮುಂದಾಗಿದ್ದಾರೆ. ಆದರೆ ವೇತನ ಬಿಡುಗಡೆ ಮಾಡಿದ್ದಕ್ಕೆ ಪ್ರತಿಯಾಗಿ ಪ್ರತಿ ನೌಕರರ ಬಾಕಿ ವೇತನದಲ್ಲಿ ಶೇ 15ರಷ್ಟು ಕಮಿಷನ್‌ ಸಂಗ್ರಹಿಸಿದ್ದೇನೆ ಎಂಬುದು ಸುಳ್ಳು’ ಎಂದು ವಾಟರ್‌ಮ್ಯಾನ್ ಶಿವಕುಮಾರ್ (ಮಾಯಣ್ಣ) ದೇವರ ಫೋಟೊ ಮೇಲೆ ಕೈ ಇಟ್ಟು ಪ್ರಮಾಣ ಮಾಡಿದರು. ‘ನೌಕರರ ಕುಟುಂಬದ ಮಹಿಳೆ ಜೊತೆ ನಡೆಸಿರುವ ಮೊಬೈಲ್ ಸಂಭಾಷಣೆಯ ಆಡಿಯೊ ಮತ್ತು ಹಣದ ಕವರ್‌ ಪಡೆಯುತ್ತಿರುವ ಫೋಟೊ ನನ್ನದೇ. ನೌಕರನಿಗೆ ಹಿಂದೆ ನಾನು ಕೊಟ್ಟಿದ್ದ ₹1 ಲಕ್ಷ ಸಾಲವನ್ನು ಹಿಂದಿರುಗಿಸಿದಾಗ ಸಾಕ್ಷಿಗಾಗಿ ಫೋಟೊ ತೆಗೆದುಕೊಂಡಿದ್ದಾರೆ. ಪುರಸಭೆ ಸದಸ್ಯ ಉಮೇಶ್ ಅವರ ಹೆಸರು ಹೇಳಿದರೆ ಹೆದರಿಕೊಂಡು ಸಾಲ ಬೇಗ ಕೊಡುತ್ತಾರೆಂದು ಮೊಬೈಲ್‌ನಲ್ಲಿ ಮಾತನಾಡುವಾಗ ಅವರ ಹೆಸರು ಹೇಳಿದ್ದೇನೆ. ಈ ವಿಷಯದಲ್ಲಿ ನನ್ನದೇನೂ ತಪ್ಪಿಲ್ಲ’ ಎಂದರು. ಅವರ ಮಾತಿಗೆ ಮೊಬೈಲ್‌ನಲ್ಲಿ ಮಾತನಾಡಿದ್ದ ಮಹಿಳೆ ಸಹ ದನಿಗೂಡಿಸಿದರು.
ಸೇವೆಯಿಂದ ಶಿವಕುಮಾರ್ ತೆಗೆದು ಹಾಕಲು ಡಿ.ಸಿ ಸೂಚನೆ
ರಾಮನಗರ: ಬಿಡದಿ ಪುರಸಭೆಯಲ್ಲಿ ಅನುಮೋದನೆಗೊಳ್ಳದ ವಾಟರ್‌ಮ್ಯಾನ್‌ಗಳು ಹಾಗೂ ಕಂಪ್ಯೂಟರ್ ಅಪರೇಟರ್‌ಗಳ ವೇತನ ಪಾವತಿಗೆ ಸಂಬಂಧಿಸಿದಂತೆ ನೌಕರರಿಂದ ಹಣ ಪಡೆದಿರುವ ಆರೋಪ ಎದುರಿಸುತ್ತಿರುವ ವಾಟರ್‌ಮ್ಯಾನ್ ಶಿವಕುಮಾರ್ ಅವರನ್ನು ಸೇವೆಯಿಂದ ತೆಗೆದು ಹಾಕುವಂತೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದ್ದಾರೆ ವೇತನ ಪಾವತಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಪುರಸಭೆ ಅಧ್ಯಕ್ಷರು ಹಾಗೂ ಸದಸ್ಯರು ಗುರುವಾರ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ. ಅದರ ಬೆನ್ನಲ್ಲೇ ಶಿವಕುಮಾರ್ ಅವರನ್ನು ಸೇವೆಯಿಂದ ತೆಗೆದು ಹಾಕಿ ವರದಿ ನೀಡುವಂತೆ  ಯಶವಂತ್ ವಿ. ಗುರುಕರ್ ಅವರು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಿಗೆ ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT