ಚನ್ನಪಟ್ಟಣ: ತಾಲ್ಲೂಕಿನ ಬೊಂಬೆನಾಡು ಗಂಗೋತ್ಸವ ಅಂಗವಾಗಿ ತಾಲ್ಲೂಕಿನ ಐದು ಜಿಲ್ಲಾ ಪಂಚಾಯಿತಿ ಹಾಗೂ ನಗರ ಮಟ್ಟದಲ್ಲಿ ನಡೆದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಒಟ್ಟು 12 ತಂಡಗಳು ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿವೆ.

ತಾಲ್ಲೂಕಿನ ಅಕ್ಕೂರು ಜಿ.ಪಂ.ವ್ಯಾಪ್ತಿಯಲ್ಲಿ ನಡೆದ ಪಂದ್ಯಾವಳಿಯಲ್ಲಿ ಹಾರೋಕೋಪ್ಪ ಗ್ರಾಮದ ಎಂಬಿಸಿ ತಂಡ ಪ್ರಥಮ ಸ್ಥಾನ, ಅಕ್ಕೂರು ಯುನಿಟೆಡ್ ಫ್ರೆಂಡ್ಸ್ ದ್ವಿತೀಯ ಸ್ಥಾನ, ಕೋಡಂಬಹಳ್ಳಿ ಜಿ.ಪಂ.ವ್ಯಾಪ್ತಿಯಲ್ಲಿ ನಡೆದ ಪಂದ್ಯಾವಳಿಯಲ್ಲಿ ಕೋಡಂಬಹಳ್ಳಿ ಗ್ರೌಂಡ್ ಬಾಯ್ಸ್ ಪ್ರಥಮ ಸ್ಥಾನ, ಚೌಡೇಶ್ವರಿ ನಗರದ ತಂಡ ದ್ವಿತೀಯ ಸ್ಥಾನ, ಬೇವೂರು ಜಿ.ಪಂ.ವ್ಯಾಪ್ತಿಯಲ್ಲಿ ನಡೆದ ಪಂದ್ಯಾವಳಿಯಲ್ಲಿ ತಿಟ್ಟಮಾರನಹಳ್ಳಿ ಗ್ರಾಮದ ಸನ್ ರೈಸ್ ತಂಡ ಪ್ರಥಮ ಸ್ಥಾನ, ಎಚ್.ಮೊಗೇನಹಳ್ಳಿ ಗ್ರಾಮದ ಬಸವೇಶ್ವರ ಕ್ರಿಕೆಟರ್ಸ್ ತಂಡ ದ್ವಿತೀಯ ಸ್ಥಾನ ಪಡೆಯಿತು.

ಹೊಂಗನೂರು ಜಿ.ಪಂ.ವ್ಯಾಪ್ತಿಯಲ್ಲಿ ನಡೆದ ಪಂದ್ಯಾವಳಿಯಲ್ಲಿ ಬೊಂಬೆನಾಡು ಕ್ರಿಕೆಟರ್ಸ್ ತಂಡ ಪ್ರಥಮ ಸ್ಥಾನ, ಗುರು ಜ್ಯೋತಿ ಕ್ರಿಕೆಟರ್ಸ್ ದ್ವಿತೀಯ ಸ್ಥಾನ, ಮಳೂರು ಜಿ.ಪಂ.ವ್ಯಾಪ್ತಿಯಲ್ಲಿ ನಡೆದ ಪಂದ್ಯಾವಳಿಯಲ್ಲಿ ನೇತಾಜಿ ಕ್ರೀಡಾ ಸಂಘ ಪ್ರಥಮ ಸ್ಥಾನ, ಮಳೂರು ಬುಲ್ಸ್ ತಂಡ ದ್ವಿತೀಯ ಸ್ಥಾನ, ನಗರ ವ್ಯಾಪ್ತಿಯಲ್ಲಿ ನಡೆದ ಪಂದ್ಯಾವಳಿಯಲ್ಲಿ ಟೈಗರ್ಸ್ ತಂಡ ಪ್ರಥಮ ಸ್ಥಾನ, ಟಾಯ್ಸ್ ಸಿಟಿ ಬ್ರದರ್ಸ್ ದ್ವಿತೀಯ ಸ್ಥಾನವನ್ನು ಪಡೆದುಕೊಂಡವು.

ಈ ಎಲ್ಲ ತಂಡಗಳು ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿವೆ. ಬೊಂಬೆನಾಡು ಗಂಗೋತ್ಸವ ಅಂಗವಾಗಿ ಡಿ.6ರಿಂದ ಟೆನ್ನಿಲ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಆರಂಭಿಸಲಾಗಿತ್ತು. ಜಿ.ಪಂ ಹಾಗೂ ನಗರ ವ್ಯಾಪ್ತಿಯಲ್ಲಿ ನಡೆದ ಪಂದ್ಯಾವಳಿಗಳಲ್ಲಿ 300ಕ್ಕೂ ಹೆಚ್ಚು ತಂಡಗಳು ಹೆಸರು ನೋಂದಾಯಿಸಿಕೊಂಡಿದ್ದವು. ಕ್ರೀಡಾಕೂಟದಲ್ಲಿ ಭಾಗಿಯಾದ ಪ್ರತಿ ತಂಡಗಳಿಗೂ ಆಯಾ ಜಿ.ಪಂ.ವ್ಯಾಪ್ತಿಯಲ್ಲಿ ಆಯೋಜಕರು ಕ್ರಿಕೆಟ್ ಕಿಟ್ಗಳನ್ನು ಉಚಿತವಾಗಿ ವಿತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.