‘ಡಿಕೆಶಿಗಿಂತ ಅಪ್ಪಟ ಹಿಂದೂ ಬೇರೊಬ್ಬರಿಲ್ಲ’
‘ಧರ್ಮಸ್ಥಳ ಪ್ರಕರಣದ ವಿಷಯದಲ್ಲಿ ವಿರೋಧ ಪಕ್ಷದವರು ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಪ್ರಚೋದಿಸುತ್ತಿದ್ದಾರೆ. ಅವರಂತಹ ಅಪ್ಪಟ ಹಿಂದೂ ಯಾರೂ ಸಿಗುವುದಿಲ್ಲ. ಅವರು ನಮ್ಮ ರಾಷ್ಟ್ರ ನಾಯಕ. ಯಾವುದೇ ರಾಜ್ಯಕ್ಕೆ ಹೋದರೂ ಅವರಿಗೆ ಅಭಿಮಾನಿಗಳಿದ್ದಾರೆ. ನಮ್ಮ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಸಹಿಸದ ವಿರೋಧ ಪಕ್ಷದವರು, ಸಿ.ಎಂ ಮತ್ತು ಡಿಸಿಎಂ ವಿರುದ್ಧ ಅಸಹನೆ ವ್ಯಕ್ತಪಡಿಸುತ್ತಿದ್ದಾರೆ. ಅವರ ಕುತಂತ್ರಗಳಿಗೆ ನಾವು ತಕ್ಕ ಉತ್ತರ ಕೊಡುತ್ತೇವೆ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.