‘ಒತ್ತಾಯ ಮಾಡಿದರೂ ಶುಲ್ಕ ಪಡೆಯಲಿಲ್ಲ...’
‘ನಾನು ಚಿಕ್ಕವನಿದ್ದಾಗಿನಿಂದಲೂ ಹುಷಾರಿಲ್ಲದಾಗ ಹೆಗ್ಡೆ ಸರ್ ಅವರ ಬಳಿಗೇ ಮನೆಯವರು ಕರೆದೊಯ್ಯುತ್ತಿದ್ದರು. ಬಡವರಾದ ನಮ್ಮ ಬಳಿ ಅವರು ಶುಲ್ಕ ತೆಗೆದುಕೊಳ್ಳುತ್ತಿರಲಿಲ್ಲ. ಇದೀಗ ನಾನು ಚನ್ನಾಗಿ ಓದಿ ಕೆಲಸದಲ್ಲಿದ್ದೇನೆ. ಕೆಲ ತಿಂಗಳ ಹಿಂದೆ ಹುಷಾರಿಲ್ಲದ ಕಾರಣ ಹೆಗ್ಡೆ ಸರ್ ಅವರನ್ನು ನೋಡಿದಂತಾಗುತ್ತದೆ ಎಂದು ಅವರ ಪ್ರಗತಿ ಕ್ಲಿನಿಕ್‌ಗೆ ಹೋಗಿದ್ದೆ. ಚಿಕಿತ್ಸೆ ನೀಡಿದ ಬಳಿಕ ಎಂದಿನಂತೆ ಅವರು ನನ್ನಿಂದ ಶುಲ್ಕ ಪಡೆಯಲಿಲ್ಲ. ಒತ್ತಾಯ ಮಾಡಿ ಕೊಡುವುದಕ್ಕೆ ಹೋದರೂ ನಗುಮೊಗುದಿಂದ ಇರಲಿ ಹೋಗೋ ಎಂದು ಕಳಿಸಿದರು’ ಎಂದು ಹೆಗ್ಡೆ ಅವರ ಅಂತಿಮ ದರ್ಶನ ಪಡೆಯಲು ಬಂದಿದ್ದ ವ್ಯಕ್ತಿಯೊಬ್ಬರು ಹೇಳುತ್ತಿದ್ದದ್ದು ಡಾ. ಕೆ.ಪಿ. ಹೆಗ್ಡೆ ಅವರ ವ್ಯಕ್ತಿತ್ವ ಎಂತಹದ್ದು ಎಂಬುದಕ್ಕೆ ಸಾಕ್ಷಿ ಹೇಳುವಂತಿತ್ತು.