ಸೋಮವಾರ, ಫೆಬ್ರವರಿ 24, 2020
19 °C

ಮರೀಗೌಡನದೊಡ್ಡಿ ಹಾಲಿನ ಡೇರಿಗೆ ಅವಿರೋಧ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಯ್ಯಂಬಳ್ಳಿ (ಕನಕಪುರ): ಇಲ್ಲಿನ ಉಯ್ಯಂಬಳ್ಳಿ ಹೋಬಳಿ ಮರೀಗೌಡನದೊಡ್ಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಪೂರ್ಣಿಮಾ, ಉಪಾಧ್ಯಕ್ಷರಾಗಿ ಪಾರ್ವತಮ್ಮ ಅವಿರೋಧವಾಗಿ ಆಯ್ಕೆಯಾದರು.

ಸಂಘದ ಆಡಳಿತ ಮಂಡಳಿ 5ವರ್ಷಗಳ ಅವಧಿಗೆ ನಿರ್ದೇಶಕರ ಆಯ್ಕೆಗಾಗಿ ಜ.22ರಂದು ನಡೆದ ಚುನಾವಣೆಯಲ್ಲಿ ಎಲ್ಲ 12 ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದರು. 

ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಸಂಘದ ರಿಟರ್ನಿಂಗ್‌ ಆಫೀಸರ್‌ ಡಿ.ಎಂ.ಮಹಮ್ಮದ್‌ ನದೀಂ ಚುನಾವಣೆ ನಿಗದಿ ಮಾಡಿ ಫೆ.9ರಂದು ಚುನಾವಣೆ ನಡೆಸಿದರು.

ಸಂಘದ ನಿರ್ದೇಶಕರಾದ ಸುಮಿತ್ರಮ್ಮ, ಜಯಮ್ಮ ಮುನಿರಾಜು, ಸುಶೀಲ, ಶಿವಮ್ಮ, ಕೆಂಪಮ್ಮ, ಗೌರಮ್ಮ, ಜಯರತ್ನಮ್ಮ, ಜಯಮ್ಮರಮೇಶ್‌, ವೆಂಕಟಲಕ್ಷ್ಮಮ್ಮ, ಮಹದೇವಮ್ಮ ಚುನಾವಣೆಯಲ್ಲಿ ಪಾಲ್ಗೊಂಡಿದ್ದರು. ಸಂಘದ ಮುಖ್ಯ ಕಾರ್ಯ ನಿರ್ವಾಹಕಿ ಬಿ.ಮಮತಾ ಚುನಾವಣಾ ಸಹಾಯಕರಾಗಿ ಕಾರ್ಯ ನಿರ್ವಹಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು