ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಾಗಡಿ | ಎಲೆಕ್ಟ್ರಿಕ್ ಬೈಕ್‌ಗೆ ಬೆಂಕಿ: ಅಪಾರ ನಷ್ಟ

Published 18 ಆಗಸ್ಟ್ 2024, 14:31 IST
Last Updated 18 ಆಗಸ್ಟ್ 2024, 14:31 IST
ಅಕ್ಷರ ಗಾತ್ರ

ಮಾಗಡಿ: ಮನೆಯಲ್ಲಿ ಚಾರ್ಜ್ ಹಾಕಿದ್ದ ಎಲೆಕ್ಟ್ರಿಕ್‌ ಬೈಕ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಮನೆಯಲ್ಲಿದ್ದ ಎಲೆಕ್ಟ್ರಿಕ್ ವಸ್ತುಗಳು ಸುಟ್ಟು ಹೋಗಿ ಅಪಾರ ನಷ್ಟ ಉಂಟಾಗಿರುವ ಘಟನೆ ಮಾಗಡಿಯಲ್ಲಿ ನಡೆದಿದೆ. 

ಪಟ್ಟಣದ ಕಲ್ಯಾಗೇಟ್‌ ಸಮೀಪದ ನಿವಾಸಿ ಲಕ್ಷ್ಮಿನರಸಿಂಹ ಎಂಬುವರು ಭಾನುವಾರ ಮುಂಜಾನೆ ತಮ್ಮ ಎಲೆಕ್ಟ್ರಿಕ್ ಬೈಕ್‌ಗೆ ಚಾರ್ಜ್ ಹಾಕಿ ಮಲಗಿದ್ದರು. ಅರ್ಧ ಗಂಟೆ ಸಮಯದಲ್ಲಿ ಸುಟ್ಟ ವಾಸನೆ ಬಂದಿದೆ. ಎದ್ದು ನೋಡುವಷ್ಟರಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಬೆಂಕಿ ನಂದಿಸಲು ಸಾಕಷ್ಟು ಪ್ರಯತ್ನಿಸಿದರೂ ಸಾಧ್ಯವಾಗದೆ ಸ್ಥಳೀಯರ ಸಹಾಯದಿಂದ ಬೈಕ್‌ ಅನ್ನು ಮನೆ ಹೊರಗೆ ತಂದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಕೈಕಾಲು, ಮುಖದ ಭಾಗಕ್ಕೆ ಬೆಂಕಿ ತಗುಲಿದ್ದು ಆಸ್ಪತ್ರೆಗೆ ದಾಖಲಾಗಿ ಪ್ರಥಮ ಚಿಕಿತ್ಸೆ ಪಡೆದಿದ್ದಾರೆ.

ಬೈಕ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಮನೆಯಲ್ಲಿದ್ದ ವಾಷಿಂಗ್ ಮಿಷಿನ್, ಯುಪಿಎಸ್ ಸೇರಿದಂತೆ ಪಿಠೋಪಕರಣಗಳು ಸಂಪೂರ್ಣ ನಾಶವಾಗಿವೆ. ಲಕ್ಷ್ಮಿನರಸಿಂಹ ಅವರು ನೇಕಾರಿಕೆ ಮಾಡಿಕೊಂಡು ಜೀವನ ನಡೆಸುತ್ತಿದ್ದರು. 

ವಾಷಿಂಗ್ ಮಿಷಿನ್ ಯುಪಿಎಸ್ ಸುಟ್ಟು ಹೋಗಿರುವುದು
ವಾಷಿಂಗ್ ಮಿಷಿನ್ ಯುಪಿಎಸ್ ಸುಟ್ಟು ಹೋಗಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT