ಶನಿವಾರ, ಜನವರಿ 28, 2023
15 °C

ಒತ್ತುವರಿ ಸರ್ಕಾರಿ ಜಮೀನು ತೆರವು: ಮಂಚನಾಯಕನಹಳ್ಳಿ ಗ್ರಾಮ ಪಂಚಾಯಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಿಡದಿ: ಅನಧಿಕೃತವಾಗಿ ಒತ್ತುವರಿಯಾಗಿದ್ದ ಮಂಚನಾಯಕನಹಳ್ಳಿ ವ್ಯಾಪ್ತಿಯ ಬಿಲ್ಲಕೆಂಪ್ಪನಹಳ್ಳಿಯ ಸರ್ವೆ ನಂ. 5ರ ಕೆರೆಯ ಸುಮಾರು 9 ಎಕರೆ ಜಮೀನು ಹಾಗೂ ಮಂಚನಾಯಕನಹಳ್ಳಿ ಗ್ರಾಮ ಪಂಚಾಯಿತಿಯ ಸರ್ವೆ ನಂ. 35ರ 30 ಗುಂಟೆ ಜಾಗವನ್ನು ಗ್ರಾಮ ಪಂಚಾಯಿತಿ, ಕಂದಾಯ ಇಲಾಖೆ, ಸರ್ವೆ ಇಲಾಖೆಯ ಸಹಯೋಗದೊಂದಿಗೆ ಗುರುತಿಸಿ ತೆರವುಗೊಳಿಸಲಾಯಿತು.

ಅಧ್ಯಕ್ಷ ಸತೀಶ್ ಕುಮಾರ್‌, ಸದಸ್ಯರಾದ ನಂದಪ್ರಭ ಆನಂದ್, ಮಮತಾ ರವಿಕುಮಾರ್, ಮಹೇಶ್, ಬಿಲ್ಲಕೆಂಪ್ಪನಹಳ್ಳಿ ಪಂಚಾಯಿತಿ ಸದಸ್ಯರಾದ ಸತೀಶ್, ಆನಂದ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿವಕುಮಾರ್ ಸಮ್ಮುಖದಲ್ಲಿ ಜಾಗ ಗುರುತಿಸಿ ತೆರವುಗೊಳಿಸಲಾಯಿತು.

‘ಅಪಾರ ಬೆಲೆ ಬಾಳುವ ಈ ಜಾಗವನ್ನು ಪಂಚಾಯಿತಿಯ ಅಭಿವೃದ್ಧಿಗೆ ನೀಡುವಂತೆ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಲಾಗುವುದು’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ್ ಕುಮಾರ್ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು