‘ಮನುಷ್ಯನ ದುರಾಸೆಗೆ ಪರಿಸರ ನಾಶ’

ಮಾಗಡಿ: ‘ಮನುಷ್ಯನ ದುರಾಸೆಗೆ ಪರಿಸರ ನಾಶವಾಗದಂತೆ ನಾವೆಲ್ಲರೂ ಜನ ಜಾಗೃತಿ ವಹಿಸಬೇಕಿದೆ’ ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸಮಿತಿ ರಾಜ್ಯ ಸಂಚಾಲಕ ಮಹಮದ್ ಇಮ್ರಾನ್ ತಿಳಿಸಿದರು.
ಪಟ್ಟಣದ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ನಡೆದ ಹೆಲ್ತಿ ಕ್ಯಾಂಪಸ್ 2019, 'ಜಲಸಂರಕ್ಷಣೆ ನಮ್ಮ ಹೊಣೆ' ವಿಡಿಯೊ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.
ನೀರಿನ ಅತಿಯಾದ ಬಳಕೆ ಆತಂಕಕಾರಿ ಬೆಳವಣಿಗೆ ಆಗಿದೆ. ಮಳೆಗಾಲದಲ್ಲಿ ಸಸಿನೆಟ್ಟು ಪರಿಸರ ರಕ್ಷಿಸುವುದರ ಜೆತೆಗೆ ಅಂತರ್ಜಲ ಸಂರಕ್ಷಿಸಬೇಕಿದೆ. ಮಳೆ ನೀರು ಪದ್ಧತಿಯನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಮುಖ್ಯಶಿಕ್ಷಕ ಮಹದೇವಸ್ವಾಮಿ ಮಾತನಾಡಿ, ‘ವಿದ್ಯಾರ್ಥಿಗಳು ನೀರಿನ ಮಿತ ಬಳಕೆ ಮಾಡುವುದನ್ನು ಕರಗತ ಮಾಡಿಕೊಳ್ಳಬೇಕಿದೆ’ ಎಂದು ಸಲಹೆ ನೀಡಿದರು.
ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ತಾಲ್ಲೂಕು ಘಟಕದ ಅಧ್ಯಕ್ಷ ಸುಹೇಲ್ ಮಾತನಾಡಿ, ‘ಪರಿಸರ ಮತ್ತು ಜಲಸಂರಕ್ಷಣೆಗೆ ಎಲ್ಲರೂ ಮುಂದಾಗಬೇಕಿದೆ’ ಎಂದರು.
ಮುಹಿನ್, ಅಲ್ಲಾಭಕ್ಷ್ಯ್, ಶಬೀರ್, ಮಸ್ತಾನ್, ಸಲೀಂ, ಮಹಮದ್ ಶಬೀರ್, ಮುಬಿನಾಖಾನ್, ಫಾತಿಮಾಖಾನಂ, ಮಹಮದ್ ಶುಕೂರ್, ಶಿಕ್ಷಕ ಜಯದೇವ್ ಮಾತನಾಡಿದರು. ಶಾಲೆ ಆವರಣದಲ್ಲಿ ಸಸಿನೆಟ್ಟು ನೀರೆರೆಯಲಾಯಿತು. ಜಲಸಂರಕ್ಷಣೆ ಬಗ್ಗೆ ವಿಡಿಯೊ ಚಿತ್ರಣ ಪ್ರದರ್ಶಿಸಲಾಯಿತು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.