ಮಾಗಡಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಹಸಿರು ಸೇನೆ ರೈತ ಸಂಘದಿಂದ ಗುರುವಾರ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ ರೈತರನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದರು.

ರೈತ ಸಂಘದ ಅಧ್ಯಕ್ಷ ಹೊಸಪಾಳ್ಯ ಲೋಕೇಶ್, ‘ತಹಶೀಲ್ದಾರರಿಗೆ 15 ದಿನಗಳ ಹಿಂದೆಯೇ ಬೇಡಿಕೆಗಳನ್ನು ಈಡೇರಿಸಲು ರೈತ ಸಂಘ ಮತ್ತು ಅಧಿಕಾರಿಗಳ ಸಭೆ ಕರೆಯುವಂತೆ ಮನವಿ ಮಾಡಲಾಗಿತ್ತು. ಆದರೆ, ತಹಶೀಲ್ದಾರರು ಅಧಿಕಾರಿಗಳನ್ನು ಕರೆಯಲೇ ಇಲ್ಲ. ಸಮಸ್ಯೆ ಹೇಳಿಕೊಳ್ಳಲು ಅಧಿಕಾರಿಗಳು ಸಭೆಗೆ ಬರುವುದಿಲ್ಲ. ರೈತ ಸಂಘದ ವಿರುದ್ಧ ಉದಾಸೀನತೆ ತೋರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಡಾ.ಎಚ್.ಎಂ.ಕೃಷ್ಣಮೂರ್ತಿ, ಅಧಿಕಾರ ಮತ್ತು ಸರ್ಕಾರ ಶಾಶ್ವತವಲ್ಲ. ರೈತ ಸಂಘದ ಬೇಡಿಕೆಗಳೊಂದಿಗೆ ಪ್ರತಿಭಟನೆ ಮಾಡಿದರೆ ಅಧಿಕಾರ ಮತ್ತು ಪೊಲೀಸರನ್ನು ಬಳಸಿಕೊಂಡು ರೈತರನ್ನು ಬಂಧಿಸುವ ಕೆಲಸವನ್ನು ಶಾಸಕರು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕೆ ಬಾರದ ಅಧಿಕಾರಿಗಳು: ಪ್ರತಿಭಟನಾ ಸ್ಥಳಕ್ಕೆ ತಹಶೀಲ್ದಾರ್, ಉಪ ತಹಶೀಲ್ದಾರ್ ಸೇರಿದಂತೆ ಯಾವ ಅಧಿಕಾರಿಯೂ ಬರದ ಕಾರಣ ರೈತರು ಅಸಮಾಧಾನ ವ್ಯಕ್ತಪಡಿಸಿದರು. ಸ್ಥಳಕ್ಕೆ ಭೇಟಿ ನೀಡಿದ ತಾಲ್ಲೂಕು ಕಚೇರಿ ಸಿಬ್ಬಂದಿ, ತಹಶೀಲ್ದಾರ್ ಮತ್ತು ಉಪ ತಹಶೀಲ್ದಾರ್ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ಎರಡು ದಿನಗಳೊಳಗೆ ಬೇಡಿಕೆಗಳನ್ನು ಬಗೆಹರಿಸಲು ತಾಲ್ಲೂಕು ಕಚೇರಿಯಲ್ಲಿ ಸಭೆ ಕರೆಯಲಾಗುವುದಾಗಿ ಮನವರಿಕೆ ಮಾಡಿದರು. ಇದಕ್ಕೆ ಒಪ್ಪಿದ ರೈತರು ಪ್ರತಿಭಟನೆ ಮುಂದುವರಿಸಿದರು.

ದಲಿತ ಮುಖಂಡರಾದ ಮಾಡಬಾಳ್ ಜಯರಾಂ, ದೊಡ್ಡಿಗೋಪಿ, ರೈತ ಸಂಘ ಯುವ ಘಟಕದ ಜಿಲ್ಲಾ ಅಧ್ಯಕ್ಷ ರಂಗಪ್ಪ, ರೈತ ಮುಖಂಡರಾದ ಧನಂಜಯ್ಯ, ಶಿವರಾಮು, ಶಿವಲಿಂಗಯ್ಯ, ಕಾಂತರಾಜು, ಕುರುಪಾಳ್ಯ ಬುಡನಸಾಬ್, ಶಿವರುದ್ರಯ್ಯ, ನಾರಾಯಣ್, ಸಲೀಂಪಾಷಾ, ನಿಂಗರಾಜು, ಮುನಿರಾಜು, ಹನುಮಂತು, ಲೋಕೇಶ್, ಕರೇನಹಳ್ಳಿ ಕೃಷ್ಣಪ್ಪ, ವೆಂಕಟೇಶ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.