ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಕಾಶೆ ರಸ್ತೆ ತೆರವುಗೊಳಿಸಲು ವಿಳಂಬ: ರೈತರ ಆಕ್ರೋಶ

Published 14 ಜೂನ್ 2024, 15:39 IST
Last Updated 14 ಜೂನ್ 2024, 15:39 IST
ಅಕ್ಷರ ಗಾತ್ರ

ಕನಕಪುರ: ಒತ್ತುವರಿ ಮಾಡಿಕೊಂಡಿರುವ ನಕಾಶೆ ರಸ್ತೆ ‌ತೆರವುಗೊಳಿಸಲು ಅರ್ಜಿಕೊಟ್ಟು ವರ್ಷವಾದರೂ ತೆರವುಗೊಳಿಸದ ತಾಲ್ಲೂಕು ಆಡಳಿತ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆಗೆ ಮುಂದಾದ ಘಟನೆ ಶುಕ್ರವಾರ ನಡೆಯಿತು.

ಉಯ್ಯಂಬಳ್ಳಿ ಹೋಬಳಿ ಮರಳೇಬೇಕುಪ್ಪೆ ಕೆಲ ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ನಕಾಶೆ ‍ರಸ್ತೆ ಮುಚ್ಚಿರುವ ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.

ತಾಲ್ಲೂಕು ಆಡಳಿತ ಇದುವರೆಗೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.‌

ಜೂನ್‌ 19ರವರೆಗೂ ಕಾದು ನೋಡಲಾಗುವುದು. ಕ್ರಮಕೈಗೊಳ್ಳಲಿದ್ದರೆ ತಾಲ್ಲೂಕು ಕಚೇರಿ ಮುಂಭಾಗ ಅನಿರ್ದಿಷ್ಟಾವಧಿವರೆಗೂ ಪ್ರತಿಭಟನಾ ಧರಣಿ ನಡೆಸುವುದಾಗಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT