ಕುದೂರು: ಮೇ ತಿಂಗಳ ಆರಂಭದಿಂದಲೇ ಮೈದಳೆಯುವ ಗುಲ್‌ಮೊಹರ್ ಹೂವಿನ ಮರಗಳ ಸೌಂದರ್ಯಕ್ಕೆ ಮನಸೋಲದವರಿಲ್ಲ. ರಸ್ತೆಗಳ ಅಕ್ಕಪಕ್ಕ ಸ್ವಾಗತ ಕೋರುವ ಈ ಕೆಂಪುಹೂವಿನ ಚಂದಕ್ಕೆ ಮಾರು ಹೋಗದವರಿಲ್ಲ.

ಕುದೂರು - ಮರೂರು ಮುಖ್ಯರಸ್ತೆ ಬದಿಗಳಲ್ಲಿ ಅರಳಿ ನಿಂತ ಗುಲ್‌ಮೊಹರ್ ವಾಹನಸಂಚಾರರ ಕಣ್ಮನ ಸೆಳೆಯುತ್ತಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಏಪ್ರಿಲ್, ಮೇ ತಿಂಗಳಿನಲ್ಲಿ ನಡೆಯುವ ಸಾಂಪ್ರದಾಯಿಕ ಜಾತ್ರೆಗಳು, ಹಬ್ಬ ಹರಿದಿನಗಳಲ್ಲಿ ಈ ಹೂವಿನ ಬಳಕೆ ಹೆಚ್ಚು. ತಳಿರು ತೋರಣ, ಚಪ್ಪರಗಳಲ್ಲಿ ಈ ಹೂವು ಬಳಕೆಗೆ ಪ್ರಾಶಸ್ತ್ಯ. ಗ್ರಾಮಗಳ ಹೆಬ್ಬಾಗಿಲನ್ನು ಸಿಂಗರಿಸುವಲ್ಲಿಯೂ ಗುಲ್ ಮೊಹರ್‌ಗೆ ಸ್ಥಾನ. ಜಾತ್ರೆಗಳಲ್ಲಿ ಹೆಣ್ಣು ಮಕ್ಕಳು ತಯಾರಿಸುವ ತಂಬಿಟ್ಟಿನ ದೀಪಗಳಿಗೆ ಅಲಂಕಾರ ಹೆಚ್ಚಿಸುವುದು ಇದೇ ಹೂ ರಾಶಿ.

ಸಾಮಾನ್ಯವಾಗಿ ಮೇ ತಿಂಗಳಲ್ಲಿ ಗೊಂಚಲು ಗೊಂಚಲಾಗಿ ಕೆಂಬಣ್ಣದಂತೆ ಕಂಡು ಬರುವ ಈ ಹೂಗಳು ನೋಡುಗರ ಮನ ತಣಿಸುತ್ತಿವೆ. ಮುಂಗಾರು ಆರಂಭಕ್ಕೂ ಮುನ್ನವೇ ಅರಳಿ ಮನಸೆಳೆಯುವ ಈ ಹೂಗಳು ಮುಂಗಾರು ಮಳೆ ಬರುವಿಕೆಗೆ ಸ್ವಾಗತ ಕೋರುವಂತೆ ಭಾಸವಾಗುತ್ತಿವೆ.

ಈ ಮರಗಳಲ್ಲಿ ಎಲೆಗಳಿಗಿಂತ ಹೂಗಳೇ ಇಡೀ ಮರವನ್ನು ಆವರಿಸಿರುತ್ತವೆ. ಕೆಂಪು ಬಣ್ಣದ ಹೂಗಳು ಇಡೀ ಮರವನ್ನು ತುಂಬಿಕೊಂಡಿರುತ್ತವೆ. ಎಲೆಗಳು ಅಲ್ಲಲ್ಲಿ ಕಂಡು ಬರುತ್ತವೆ. ಇನ್ನೇನು ಬೇಸಿಗೆ ಮುಗಿಯಿತು, ಮಳೆ ಬರುವ ಸಮಯ ಎನ್ನುವ ಸಮಯದಲ್ಲಿ ಈ ಹೂಗಳು ಇಡಿ ಗಿಡವನ್ನೆಲ್ಲಾ ಆವರಿಸಿ ಸೌಂದರ್ಯ ಹೆಚ್ಚಿಸಿಕೊಳ್ಳುತ್ತವೆ.

ಗುಲ್‌ಮೊಹರ್‌ನ ಮರದ ವೈಜ್ಞಾನಿಕ ಹೆಸರು ಡೆಲೋನಿಕ್ಸ್ ರೆಜಿಯಾ ರಾಫ್. ಮಕ್ಕಳು ಇದನ್ನು ಬಳಸಿ ‘ಕೋಳಿ ಪಂದ್ಯ’ ಎಂಬ ಆಟವಾಡುತ್ತಾರೆ. ಹಿಂದಿಯಲ್ಲಿ ಈ ಮರವನ್ನು ‘ಗುಲ್ ಮೊಹರ್’ ಎಂದು ಕರೆಯುತ್ತಾರೆ. ಗುಲ್ ಎಂದರೆ ಗುಲಾಬಿ ಅಥವಾ ಹೂವು. ಮೋರ್ ಅಂದರೆ ನವಿಲು. ನವಿಲು ಗುಲಾಬಿ ಗುಲ್ ಮೊಹರ್ ಎಂದಾಗಿದೆ. ಇದಕ್ಕೆ ಮೇ ಪ್ಲಾವರ್ ಎಂತಲೂ ಕರೆಯುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.