ಸರ್ಕಾರಿ ಶಾಲೆಗಳು ಎಂದರೆ ಮೂಗು ಮುರಿಯುವವರ ನಡುವೆ ಇಲ್ಲೊಂದು ಸಂಸ್ಥೆ ಸರ್ಕಾರಿ ಶಾಲೆಗಳನ್ನು ಉಳಿಸುವ ಪಣತೊಟ್ಟು ನಿಂತಿದೆ. ಹೂವಿನ ಹೊಳೆ ಪ್ರತಿಷ್ಠಾನ ಎನ್ನುವ ಸರ್ಕಾರೇತರ ಸಂಸ್ಥೆ ಇಂತಹ ಉತ್ತಮ ಕೆಲಸವನ್ನು ಮಾಡುತ್ತಿದೆ. ಈ ಸಂಸ್ಥೆಯ ರೂವಾರಿ ನಂದಿ ಹೂವಿನಹೊಳೆ. ಒಂದು ತಂಡವನ್ನು ಕಟ್ಟಿಕೊಂಡು ಇಲ್ಲಿಯವರೆಗೆ 46 ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಿದ್ದಾರೆ.