ಭಾನುವಾರ, ಅಕ್ಟೋಬರ್ 24, 2021
23 °C

ಮನೆ ತಾರಸಿಯಲ್ಲಿ ಬೆಳೆದ ಹೈಡ್ರೋ ಗಾಂಜಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಿಡದಿ: ಇಲ್ಲಿನ ಈಗಲ್‌ಟನ್ ರೆಸಾರ್ಟ್‌ ಸಮೀಪ ಇರುವ ವಿಲ್ಲಾವೊಂದರ ತಾರಸಿಯಲ್ಲಿ ಹೈಡ್ರೋ ಗಾಂಜಾ ಗಿಡಗಳನ್ನು ಬೆಳೆದಿದ್ದ ಇರಾನ್‌ ಮೂಲದ ಜಾವಿದ್ ರುಸ್ತಂಪುರಿ (36) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಮನೆಯ ತಾರಸಿ ಹಾಗೂ ಕೊಠಡಿಯಲ್ಲಿದ್ದ 150ಕ್ಕೂ ಹೆಚ್ಚು ಗಿಡಗಳು ಹಾಗೂ ರಾಸಾಯನಿಕಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಾರುಕಟ್ಟೆಯಲ್ಲಿ ಇವುಗಳ ಮೌಲ್ಯ ಲಕ್ಷಾಂತರ ರೂಪಾಯಿಗಳಷ್ಟಿದೆ ಎಂದು ಹೇಳಲಾಗಿದೆ.

ಆನ್‌ಲೈನ್‌ ಮೂಲಕ ಬಿತ್ತನೆ ಬೀಜಗಳನ್ನು ತರಿಸಿಕೊಂಡಿದ್ದ ಆರೋಪಿ ಕಳೆದ ಒಂದೂವರೆ ವರ್ಷದಿಂದ ಇಲ್ಲಿ ಹೈಡ್ರೋ ಗಾಂಜಾ ಬೆಳೆಯುತ್ತಿದ್ದ ಎನ್ನಲಾಗಿದೆ. ಬೆಂಗಳೂರು ಸಿಸಿಬಿ ಪೊಲೀಸರು ಡಿ.ಜೆ. ಹಳ್ಳಿಯಲ್ಲಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಸಂದರ್ಭ ಆತ ಬಿಡದಿಯಲ್ಲಿ ಗಿಡಗಳನ್ನು ಬೆಳೆದಿದ್ದಾಗಿ ಸತ್ಯ ಹೇಳಿದ್ದಾನೆ.

ಸೋಮವಾರ ಆರೋಪಿಯೊಂದಿಗೆ ಆತನ ಬಿಡದಿ ನಿವಾಸಕ್ಕೆ ಬಂದ ಪೊಲೀಸರು ಗಿಡಗಳನ್ನು ವಶಕ್ಕೆ ಪಡೆದು ಕೊಂಡೊಯ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು