ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮನಗರ | ಸೆ.28ಕ್ಕೆ ಜೆಡಿಎಸ್ ಜಿಲ್ಲಾ ಸದಸ್ಯತ್ವ ಅಭಿಯಾನ

Published : 25 ಸೆಪ್ಟೆಂಬರ್ 2024, 6:02 IST
Last Updated : 25 ಸೆಪ್ಟೆಂಬರ್ 2024, 6:02 IST
ಫಾಲೋ ಮಾಡಿ
Comments

ಕನಕಪುರ: ಸೆಪ್ಟೆಂಬರ್ 28 ರಂದು ಜೆಡಿಎಸ್ ಪಕ್ಷದ ಜಿಲ್ಲಾ ಮಟ್ಟದ ಬೃಹತ್ ಸದಸ್ಯತ್ವ ಅಭಿಯಾನ ನಡೆಯಲಿದೆ ಎಂದು ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಬಿ.ನಾಗರಾಜು ತಿಳಿಸಿದರು.

ಇಲ್ಲಿನ ಪರಿವೀಕ್ಷಣ ಮಂದಿರದಲ್ಲಿ ಜೆಡಿಎಸ್ ತಾಲ್ಲೂಕು ಘಟಕದ ವತಿಯಿಂದ ನಡೆಸಿದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ತಾಲ್ಲೂಕಿನಲ್ಲಿ ಪಕ್ಷವನ್ನು ಬಲಪಡಿಸಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರು, ರಾಜ್ಯಾಧ್ಯಕ್ಷ ಕುಮಾರಸ್ವಾಮಿ, ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಈ ಅಭಿಯಾನವನ್ನು ಹಮ್ಮಿಕೊಂಡಿದ್ದು, ಜಿಲ್ಲಾ ಹಾಗೂ ತಾಲ್ಲೂಕು ಮುಖಂಡರು ಕೈಜೋಡಿಸಿ ಸದಸ್ಯತ್ವ ಅಭಿಯಾನವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಜೆಡಿಎಸ್ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಚಿನ್ನಸ್ವಾಮಿ ಹಾಗೂ ಹಿರಿಯ ಮುಖಂಡ ನಲ್ಲಳ್ಳಿ ಶಿವಕುಮಾರ್ ಮಾತನಾಡಿದರು. ಜೆಡಿಎಸ್ ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ಶುಭಾ, ನಗರಸಭೆ ಸದಸ್ಯ ಕುರುಪೇಟೆ ಲೊಕೇಶ್, ಮುಖಂಡರಾದ ಗೇರಹಳ್ಳಿ ಸಣ್ಣಪ್ಪ, ಕೊತ್ತನೂರು ನಾರಾಯಣ್, ರಾಮಕೃಷ್ಣ, ಮುದುವಾಡಿ ಪ್ರಕಾಶ್, ಕುರಿಗೌಡನದೊಡ್ಡಿ ಕುಮಾರ್, ತೊಪ್ಪಗನಹಳ್ಳಿ ರಾಜಗೋಪಾಲ್, ಬೆಟ್ಟೇಗೌಡನ ದೊಡ್ಡಿ ಮಂಜು, ಹರಳಾಳು ರಾಜೇಂದ್ರ, ಎಡಮಾರನಹಳ್ಳಿ ಪವಿತ್ರ, ವಕೀಲರಾದ ಜೈರಾಮ್, ಕೆಂಪೇಗೌಡ, ಕೂತಗಾನಹಳ್ಳಿ ಸ್ವಾಮಿ, ಗುರುಗೌಡ, ವೀರಪ್ಪ ಸೇರಿದಂತೆ ಅನೇಕ ಮುಖಂಡರು ಸಭೆಯಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT