ಗ್ರಾಮ ಲೆಕ್ಕಿಗರನ್ನು ಡಿಸಿ ವರ್ಗಾವಣೆ ಮಾಡಿದರೆ ಅದಕ್ಕೆ ತಡೆಯಾಜ್ಞೆ ತರುವುದು ಹೆಚ್ಚಾಗಿದೆ. ಐಎಎಸ್ ಅಧಿಕಾರಿ ಆದೇಶಕ್ಕೆ ಬೆಲೆ ಇಲ್ಲದಂತಾಗಿದೆ. ಉತ್ತಮ ಆಡಳಿತಕ್ಕಾಗಿ ಅವರು ವರ್ಗಾವಣೆ ಮಾಡುತ್ತಾರೆ ಎಂಬುದನ್ನು ಎಲ್ಲರೂ ಅರಿಯಬೇಕು
ಎಚ್.ಎ. ಇಕ್ಬಾಲ್ ಹುಸೇನ್ ಶಾಸಕ
ಬೀದಿ ನಾಯಿಗಳ ಹಾವಳಿಯಿಂದಾಗಿ ಚಿರತೆಗಳು ಊರುಗಳತ್ತ ಬರುವುದು ಹೆಚ್ಚಾಗಿದೆ. ನಾಯಿಗಳನ್ನು ನಿಯಂತ್ರಿಸದಿದ್ದರೆ ಚಿರತೆಗಳು ಕಾಡಿನಲ್ಲಿ ಬೇಟೆಯಾಡುವುದನ್ನು ಮರೆತು ಬಿಡುತ್ತವೊ ಎಂಬ ಆತಂಕ ಶುರುವಾಗಿದೆ
ರಾಮಕೃಷ್ಣಪ್ಪ ಡಿಸಿಎಫ್ ಅರಣ್ಯ ಇಲಾಖೆ
ಬಿಸಿಎಂ ಹಾಸ್ಟೆಲ್‌ಗಳಲ್ಲಿ ಬಯೋಮೆಟ್ರಿಕ್ ವ್ಯವಸ್ಥೆ ಇರಬೇಕೆಂಬ ನಿಯಮವಿದೆ. ಆದರೆ ಬಹುತೇಕ ಹಾಸ್ಟೆಲ್‌ಗಳಲ್ಲಿಲ್ಲ. ಕಡಿಮೆ ವಿದ್ಯಾರ್ಥಿಗಳಿದ್ದರೂ ಶೇ 100ರಷ್ಟು ವಿದ್ಯಾರ್ಥಿಗಳಿದ್ದಾರೆ ಎಂದು ತೋರಿಸಿ ಆಹಾರ ಧಾನ್ಯ ಲೂಟಿ ಹೊಡೆಯಲಾಗುತ್ತಿದೆ