ಕನಕಪುರ: ಇಲ್ಲಿನ ಬೆಂಗಳೂರು ರಸ್ತೆಯ ರೈಸ್ಮಿಲ್ ಬಳಿ ಇರುವ ಟಿಎಪಿಸಿಎಂಎಸ್ನ ನೂತನ ಅಧ್ಯಕ್ಷ ಆಗಿ ಕಾಂಗ್ರೆಸ್ ಬೆಂಬಲಿತ ಚಿಕ್ಕೇನಹಳ್ಳಿ ಡಿ. ವೆಂಕಟೇಶಯ್ಯ, ಉಪಾಧ್ಯಕ್ಷ ಆಗಿ ತುಂಗಣಿ ಕೈಲಾಸ್ ಮೂರ್ತಿ ಅವಿರೋಧವಾಗಿ ಆಯ್ಕೆಯಾದರು.

ಟಿಎಪಿಸಿಎಂಎಸ್ಗೆ ಒಂದು ವಾರದ ಹಿಂದೆ ಮುಂದಿನ ಐದು ವರ್ಷಗಳ ಅವಧಿಗೆ ಆಡಳಿತ ಮಂಡಳಿಯ ನಿರ್ದೇಶಕರ ಆಯ್ಕೆಯಾಗಿತ್ತು. ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗಾಗಿ ಮಂಗಳವಾರ ಚುನಾವಣೆ ನಡೆಯಿತು.

ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಡಿ. ವೆಂಕಟೇಶಯ್ಯ, ಉಪಾಧ್ಯಕ್ಷ ಸ್ಥಾನಕ್ಕೆ ಕೈಲಾಸಮೂರ್ತಿ ಅವರು ಮಾತ್ರವೇ ನಾಮಪತ್ರ ಸಲ್ಲಿಸಿದ್ದರು. ಹೀಗಾಗಿ, ಈ ಇಬ್ಬರು ಅವಿರೋಧವಾಗಿ ಆಯ್ಕೆಯಾದರು ಎಂದು ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಸಹಕಾರ ಇಲಾಖೆಯ ಬಿ.ಕೆ. ಮಂಜುನಾಥ್ ಘೋಷಿಸಿದರು. ಎಪಿಸಿಎಂಎಸ್ ಕಾರ್ಯದರ್ಶಿ ಆಶಾ ಸಹಾಯಕ ಚುನಾವಣೆ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು.

ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಾಗುತ್ತಿದ್ದಂತೆ ಪಟಾಕಿ ಸಿಡಿಸಿ ಸಿಹಿ ವಿತರಿಸಿ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಿಸಿದರು.

ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಡಿ.ವಿಜಯದೇವ್, ಪುರುಷೋತ್ತಮ್, ಹರೀಶ್, ಸಾತನೂರು ನಾಗರಾಜು, ಬೇಕುಪ್ಪೆ ಮುತ್ತುರಾಜು, ರಾಯಸಂದ್ರ ರವಿ, ಶಿವಣ್ಣ, ದುರ್ಗೆಗೌಡ ಸೊಂಬಣ್ಣ, ನಿಂಗಣ್ಣ, ರಂಗಸ್ವಾಮಿ, ಶಾಂತರಾಜು, ಚಂದ್ರು, ಮುನುಚ್ಚೇಗೌಡ, ಹರೀಶ್, ನಾಗರಾಜು, ಟಿ ಎ ಪಿ ಸಿ ಎಂ ಎಸ್ ನ ಎಲ್ಲಾ ನಿರ್ದೇಶಕರು, ನೌಕರರು ಸಿಬ್ಬಂದಿಗಳು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.