ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಕನಕಪುರ | ಸಾಲ ಕೊಟ್ಟ ಸಂಬಂಧಿ ಮಹಿಳೆ ಕೊಲೆ: ದಂಪತಿ ಬಂಧನ

Published 10 ಜೂನ್ 2024, 20:13 IST
Last Updated 10 ಜೂನ್ 2024, 20:13 IST
ಅಕ್ಷರ ಗಾತ್ರ

ಕನಕಪುರ: ಸಾಲದ ಹಣ ಮರಳಿ ಕೊಡುವುದಾಗಿ ನಂಬಿಸಿ ಕರೆಸಿಕೊಂಡು ಸಂಬಂಧಿ ಮಹಿಳೆಯನ್ನು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ದಂಪತಿಯನ್ನು ಪೊಲೀಸರು ಭಾನುವಾರ ರಾತ್ರಿ ಬಂಧಿಸಿದ್ದಾರೆ.

ತಾಲ್ಲೂಕಿನ ಕಸಬಾ ಹೋಬಳಿ ಶ್ರೀನಿವಾಸನಹಳ್ಳಿ ಗ್ರಾಮದ ರವಿಕುಮಾರ್‌(40) ಮತ್ತು ಅವರ ಪತ್ನಿ ಆಶಾ(30) ಬಂಧಿತರು. ಬೆಂಗಳೂರಿನ ರೈಲು ನಿಲ್ದಾಣದಲ್ಲಿ ಭಾನುವಾರ ರಾತ್ರಿ ಇಬ್ಬರನ್ನೂ ಬಂಧಿಸಿದ ಪೊಲೀಸರು ಕನಕಪುರಕ್ಕೆ ಕರೆ ತಂದಿದ್ದಾರೆ.

ಕೋಡಿಹಳ್ಳಿ ಹೋಬಳಿ ಟಿ.ಗೊಲ್ಲಳ್ಳಿ ಗ್ರಾಮದ ಸಂಬಂಧಿ ಮಹಿಳೆ ಸುನಂದಮ್ಮ (56) ಅವರನ್ನು ಜೂನ್ 4ರಂದು ಚೌಕಸಂದ್ರದ ರೇಷ್ಮೆತೋಟದಲ್ಲಿ ಕೊಲೆ ಮಾಡಿ ಹೂತಿದ್ದರು.

ಸುನಂದಮ್ಮ ಅವರಿಂದ ₹20 ಸಾವಿರ ಸಾಲ ಪಡೆದಿದ್ದ ಆರೋಪಿಗಳು ಸಾಲ ಹಿಂದಿರುಗಿಸುವುದಾಗಿ ಕನಕಪುರಕ್ಕೆ ಕರೆಸಿಕೊಂಡು ಕೊಲೆ ಮಾಡಿ, ಪರಾರಿಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT