ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

SSLC Results | ರಾಮನಗರ ಜಿಲ್ಲೆಗೆ ಶೇ 71.16 ಫಲಿತಾಂಶ, 8 ವರ್ಷದಲ್ಲೇ ಕನಿಷ್ಠ

ಮಾಗಡಿಯ ಗಿರೀಶ್‌ ಕುಮಾರ್ ಜಿಲ್ಲೆಗೆ ಪ್ರಥಮ
Published 10 ಮೇ 2024, 6:15 IST
Last Updated 10 ಮೇ 2024, 6:15 IST
ಅಕ್ಷರ ಗಾತ್ರ

ರಾಮನಗರ: ಈ ಸಲದ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ 71.16 ಫಲಿತಾಂಶ ಪಡೆದಿರುವ ಜಿಲ್ಲೆಯು, ರಾಜ್ಯಮಟ್ಟದಲ್ಲಿ 26ನೇ ಸ್ಥಾನ ಪಡೆದಿದೆ. ಕಳೆದ 2023ನೇ ಸಾಲಿನಲ್ಲಿ ಶೇ 89.90ರಷ್ಟು ಫಲಿತಾಂಶದೊಂದಿಗೆ 21ನೇ ಸ್ಥಾನ ಪಡೆದಿದ್ದ ಜಿಲ್ಲೆಯು, ಈ ಬಾರಿ 5 ಸ್ಥಾನಗಳಷ್ಟು ಕುಸಿತ ಕಂಡಿದೆ. ಕಳೆದ 9 ವರ್ಷಗಳಲ್ಲಿ ಅತಿ ಕಡಿಮೆ ಫಲಿತಾಂಶ ದಾಖಲಾದ ವರ್ಷ ಇದಾಗಿದೆ.

ಮಾಗಡಿಯ ವಾಸವಿ ವಿದ್ಯಾನಿಕೇತನ ಶಾಲೆಯ ಗಿರೀಶ್ ಕುಮಾರ್ ಎಂ. 625ಕ್ಕೆ 618 (ಶೇ 98.88) ಅಂಕಗಳನ್ನು ಪಡೆಯುವ ಮೂಲಕ ಜಿಲ್ಲೆಗೆ ಮೊದಲ ಸ್ಥಾನ ಪಡೆದಿದ್ದಾನೆ. ಮಾಗಡಿ ತಾಲ್ಲೂಕು ಜಿಲ್ಲೆಗೆ ಪ್ರಥಮ ಸ್ಥಾನ ಮತ್ತು ಕನಕಪುರ ದ್ವಿತೀಯ ಪಡೆದಿದ್ದು, ಇವೆರಡೂ ತಾಲ್ಲೂಕುಗಳ ವಿದ್ಯಾರ್ಥಿಗಳು ಅಗ್ರ 5 ಸ್ಥಾನ ಗಳಿಸಿದ್ದಾರೆ. ಅದರಲ್ಲಿ ಮೊದಲ ಮೂರೂ ಸ್ಥಾನ ಪಡೆದಿರುವವರು ಮಾಗಡಿಯವರೇ ಎಂಬುದು ವಿಶೇಷ.

ಜಿಲ್ಲೆಯಲ್ಲಿ 12,681 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಿಸಿದ್ದು, ಈ ಪೈಕಿ 9,025 ಮಂದಿ ಪಾಸಾಗಿದ್ದಾರೆ. ಜಿಲ್ಲೆಯ ನಾಲ್ಕು ತಾಲ್ಲೂಕುಗಳ ಪೈಕಿ, ಕಳೆದ ಸಲ ಶೇ 83.88 ಫಲಿತಾಂಶದೊಂದಿಗೆ ಕಡೆಯ ಸ್ಥಾನದಲ್ಲಿದ್ದ ಮಾಗಡಿ, ಈ ಸಲ ಶೇ 80.36 ಫಲಿತಾಂಶದೊಂದಿಗೆ ಮುಂದಿದೆ. ಅದೇ ರೀತಿ ಕಳೆದ ಬಾರಿ ಶೇ 98.04 ಫಲಿತಾಂಶದೊಂದಿಗೆ ಮುಂದಿದ್ದ ಚನ್ನಪಟ್ಟಣ, ಈ ಸಲ ಶೇ 66.81ರಷ್ಟು ಫಲಿತಾಂಶ ಪಡೆದು ಹಿಂದುಳಿದಿದೆ.

ಬಾಲಕಿಯರು ಮೇಲುಗೈ: ಲಿಂಗವಾರು ಫಲಿತಾಂಶ ಗಮನಿಸಿದಾಗ ಈ ಸಲವೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಪರೀಕ್ಷೆಗೆ ಹಾಜರಾದ 6,352 ವಿದ್ಯಾರ್ಥಿನಿಯರಲ್ಲಿ 5,025 (ಶೇ 79.10) ವಿದ್ಯಾರ್ಥಿನಿಯರು ಪಾಸಾಗಿದ್ದಾರೆ. ಇಲ್ಲಿಯೂ ಮಾಗಡಿ ತಾಲ್ಲೂಕಿನ ಬಾಲೆಯರು ಮುಂದಿದ್ದಾರೆ. ಇಲ್ಲಿ ಪರೀಕ್ಷೆ ಬರೆದ 1,254 ವಿದ್ಯಾರ್ಥಿನಿಯರ ಪೈಕಿ 1,087 (ಶೇ 86.68) ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ. ಲಿಂಗವಾರು ಫಲಿತಾಂಶದಲ್ಲೂ ಚನ್ನಪಟ್ಟಣ ಹಿಂದುಳಿದಿದೆ. ಇಲ್ಲಿ ಪರೀಕ್ಷೆ ಬರೆದ 1,508 ವಿದ್ಯಾರ್ಥಿನಿಯರಲ್ಲಿ 1,141 (ಶೇ 75.66) ಮಂದಿ ಪಾಸಾಗಿದ್ದಾರೆ.

ಪರೀಕ್ಷೆ ಬರೆದ 6,338 ಬಾಲಕರ ಪೈಕಿ 4 ಸಾವಿರ ವಿದ್ಯಾರ್ಥಿಗಳು (ಶೇ 63.11) ಉತ್ತೀರ್ಣರಾಗಿದ್ದಾರೆ. ಬಾಲಕರ ಫಲಿತಾಂಶದಲ್ಲೂ ಮಾಗಡಿಯೇ ಮುಂದಿದೆ. ಇಲ್ಲಿ ಪರೀಕ್ಷೆ ಎದುರಿಸಿದ 1,252 ವಿದ್ಯಾರ್ಥಿಗಳ ಪೈಕಿ 927 (ಶೇ 74.04) ಮಂದಿ ಪಾಸಾಗಿದ್ದಾರೆ. ಹಿಂದುಳಿದಿರುವ ಚನ್ನಪಟ್ಟಣದಲ್ಲಿ 1,394 ಬಾಲಕರಲ್ಲಿ 798 (ಶೇ 57.24) ಮಂದಿಯಷ್ಟೇ ಉತ್ತೀರ್ಣರಾಗಿದ್ದಾರೆ.

ಇಂಗ್ಲಿಷ್‌ನಲ್ಲೇ ಹೆಚ್ಚು ಉತ್ತೀರ್ಣ: ಜಿಲ್ಲೆಯಲ್ಲಿ ಪಾಸಾದವರಲ್ಲಿ ಇಂಗ್ಲಿಷ್ ಮಾಧ್ಯಮದ ವಿದ್ಯಾರ್ಥಿಗಳೇ ಹೆಚ್ಚು. ಇಂಗ್ಲಿಷ್‌ನಲ್ಲಿ ಪರೀಕ್ಷೆ ಬರೆದ 5,966 ವಿದ್ಯಾರ್ಥಿಗಳಲ್ಲಿ 4,798 (ಶೇ 80.22) ವಿದ್ಯಾರ್ಥಿಗಳು ಪಾಸಾಗಿದ್ದಾರೆ. ನಂತರ ಕನ್ನಡದಲ್ಲಿ ಪರೀಕ್ಷೆ ಎದುರಿಸಿದ 6,576 ಮಂದಿ ಪೈಕಿ 4,158 (ಶೇ 63.22) ವಿದ್ಯಾರ್ಥಿಗಳು ಹಾಗೂ ಉರ್ದು ಮಾಧ್ಯಮದಲ್ಲಿ ಪರೀಕ್ಷೆ ಬರೆದ 139 ಮಕ್ಕಳಲ್ಲಿ 69 (ಶೇ 49.64) ಮಂದಿ ಪಾಸಾಗಿದ್ದಾರೆ.

ವಿಜ್ಞಾನ ಗಣಿತದಲ್ಲೇ ಹೆಚ್ಚು ಫೇಲ್

ಜಿಲ್ಲೆಯ ವಿಷಯವಾರು ಫಲಿತಾಂಶವನ್ನು ಗಮನಿಸಿದಾಗ ವಿಜ್ಞಾನ ಮತ್ತು ವಿಷಯದಲ್ಲೇ ಹೆಚ್ಚು ವಿದ್ಯಾರ್ಥಿಗಳು ಫೇಲಾಗಿದ್ದರೆ ಪ್ರಥಮ ಭಾಷೆಯಲ್ಲಿ ಹೆಚ್ಚು ಮಂದಿ ಪಾಸಾಗಿದ್ದಾರೆ. ಪರೀಕ್ಷೆ ಎದುರಿಸಿದ 12681 ವಿದ್ಯಾರ್ಥಿಗಳಲ್ಲಿ ವಿಜ್ಞಾನದಲ್ಲಿ 9202 (ಶೇ 72.56) ಮಂದಿ ಗಣಿತದಲ್ಲಿ 9555 (ಶೇ 75.34) ಸಮಾಜ ವಿಜ್ಞಾನದಲ್ಲಿ 9544 (ಶೇ 75.26) ದ್ವಿತೀಯ ಭಾಷೆಯಲ್ಲಿ 9661 (ಶೇ 76.18) ತೃತೀಯ ಭಾಷೆಯಲ್ಲಿ 9667 (ಶೇ 76.23) ಹಾಗೂ ಕನ್ನಡ ವಿಷಯದಲ್ಲಿ 10100 (ಶೇ 79.64) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಳೆದ ವರ್ಷವೂ ವಿಜ್ಞಾನದ (ಶೇ 93.1) ಜೊತೆಗೆ ಸಮಾಜ ವಿಜ್ಞಾನದಲ್ಲೂ (ಶೇ 94.20) ಹೆಚ್ಚು ವಿದ್ಯಾರ್ಥಿಗಳು ಫೇಲಾಗಿದ್ದರು.

ಎಸ್‌ಎಸ್‌ಎಲ್‌ಸಿ ಪರೀಕ್ಷಾ ವಿಧಾನದಲ್ಲಾದ ವೆಬ್‌ ಕ್ಯಾಸ್ಟಿಂಗ್ ಸೇರಿದಂತೆ ಕೆಲ ಬದಲಾವಣೆಗಳಾಗಿದ್ದು ಸಹ ಈ ಬಾರಿಯ ಜಿಲ್ಲೆಯ ಫಲಿತಾಂಶದಲ್ಲಿ ಕುಸಿತವಾಗಲು ಕಾರಣವಿರಬಹುದು
–ಪುರುಷೋತ್ತಮ, ಉಪ ನಿರ್ದೇಶಕ ಶಾಲಾ ಶಿಕ್ಷಣ ಇಲಾಖೆ
ಹರ್ಷಿತ ಡಿ.ಎಸ್ ದೋಣಕುಪ್ಪೆಯ ಸಿ.ಎನ್.ಎಸ್ ಮಾದರಿ ಶಾಲೆ ಮಾಗಡಿ 616 (ಶೇ 98.56)
ಹರ್ಷಿತ ಡಿ.ಎಸ್ ದೋಣಕುಪ್ಪೆಯ ಸಿ.ಎನ್.ಎಸ್ ಮಾದರಿ ಶಾಲೆ ಮಾಗಡಿ 616 (ಶೇ 98.56)
ಹಿತೈಷಿ ಎಂ.ಆರ್ ವಾಸವಿ ವಿದ್ಯಾನಿಕೇತನ ಶಾಲೆ ಮಾಗಡಿ 615 (ಶೇ 98.4)
ಹಿತೈಷಿ ಎಂ.ಆರ್ ವಾಸವಿ ವಿದ್ಯಾನಿಕೇತನ ಶಾಲೆ ಮಾಗಡಿ 615 (ಶೇ 98.4)
ತನುಶ್ರೀ ಮಹಪ್ರದ ಅಕಾಡೆಮಿ ಶಾಲೆ ಕನಕಪುರ 614 (ಶೇ 98.24)
ತನುಶ್ರೀ ಮಹಪ್ರದ ಅಕಾಡೆಮಿ ಶಾಲೆ ಕನಕಪುರ 614 (ಶೇ 98.24)
ಕಾವ್ಯ ಎಂ. ಸೇಂಟ್ ಮೈಕಲ್ ಶಾಲೆ ಕನಕಪುರ 612 (ಶೇ 97.92)
ಕಾವ್ಯ ಎಂ. ಸೇಂಟ್ ಮೈಕಲ್ ಶಾಲೆ ಕನಕಪುರ 612 (ಶೇ 97.92)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT