ಮಾಗಡಿ: ಕನಕೋತ್ಸವ ಕಳೆದ 14 ವರ್ಷಗಳಿಂದಲೂ ಎರಡು ವರ್ಷಕ್ಕೆ ಒಮ್ಮೆ ನಡೆಯುತ್ತಿದೆ. ಹೋಬಳಿ ಮಟ್ಟದಿಂದ ಪ್ರತಿಭಾವಂತ ಯುವಕರನ್ನು ಗುರುತಿಸುವ ಕೆಲಸವನ್ನು ಬೆಂಗಳೂರು ದಕ್ಷಿಣ ಜಿಲ್ಲಾ ವ್ಯಾಪ್ತಿಯಲ್ಲಿ ಮಾಡಲಾಗುತ್ತಿದೆ ಎಂದು ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಹೇಳಿದರು.

ತಾಲ್ಲೂಕಿನ ಬಗಿನಗೆರೆ ಬಿಜಿಎಸ್ ಪ್ರೌಢಶಾಲಾ ಆವರಣದಲ್ಲಿ ಕೆಂಪೇಗೌಡ ಉತ್ಸವ- 2025 ಅಂಗವಾಗಿ ತಿಪ್ಪಸಂದ್ರ ಹೋಬಳಿ ಮಟ್ಟದ ಕ್ರಿಕೆಟ್ ಮತ್ತು ವಾಲಿಬಾಲ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.

ರಾಜಕೀಯ ಹೊರತಾಗಿ ಕನಕೋತ್ಸವ ಕಾರ್ಯಕ್ರಮ ಮಾಡುತ್ತಿದ್ದು ಇಲ್ಲಿ ಗೆಲುವು–ಸೋಲು ಮುಖ್ಯವಲ್ಲ. ವೇದಿಕೆ ಕಲ್ಪಿಸಿದ್ದು ಇದರ ಸದುಪಯೋಗವನ್ನು ಜಿಲ್ಲೆಯ ಪ್ರತಿಭಾವಂತ ಯುವಕರು ಮಾಡಬೇಕು. ದುಶ್ಚಟಗಳಿಂದ ದೂರ ಉಳಿಯುವ ನಿಟ್ಟಿನಲ್ಲಿ ಕನಕೋತ್ಸವ ಮಾಡುತ್ತಿದ್ದು ಉತ್ತಮ ಪ್ರತಿಭೆಗಳನ್ನು ಇಲ್ಲಿ ಕಾಣಬಹುದಾಗಿದೆ. ಇದಕ್ಕಾಗಿ ಜಿಲ್ಲೆಯ ಎಲ್ಲ ಶಾಸಕರು ಸಹಕಾರ ನೀಡಿದ್ದಾರೆ. ಎಲ್ಲರ ಒಮ್ಮತದಿಂದ ಈ ಕಾರ್ಯಕ್ರಮ ಮಾಡಲು ತೀರ್ಮಾನಿಸಲಾಗಿದೆ ಎಂದರು.

ಶಾಸಕ ಎಚ್.ಸಿ.ಬಾಲಕೃಷ್ಣ ಮಾತನಾಡಿ, ಕನಕೋತ್ಸವ ಅಂಗವಾಗಿ ಮಾಗಡಿಯಲ್ಲಿ ಕೆಂಪೇಗೌಡ ಉತ್ಸವವನ್ನು ಒಂದು ತಿಂಗಳ ಕಾಲ ಮಾಡಲಾಗುತ್ತಿದೆ. ಹೋಬಳಿ ಮಟ್ಟದಲ್ಲಿ ಗೆದ್ದ ತಂಡಗಳನ್ನು ಮಾಗಡಿಯಲ್ಲಿ ಡಿ.26 ಮತ್ತು 27ರಂದು ಫೈನಲ್ ಪಂದ್ಯಾವಳಿ ಆಯೋಜಿಸಿ ಮೂರು ಉತ್ತಮ ತಂಡವನ್ನು ಕನಕಪುರಕ್ಕೆ ಕಳುಹಿಸಲಾಗುವುದು ಎಂದರು.

ಡಿ.27ರಂದು ಮಾಗಡಿ ಕೋಟೆ ಮೈದಾನದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ನಡೆಯಲಿದೆ. ಪ್ರತಿ ಮನೆಗೂ ತಿರುಪತಿ ಲಡ್ಡು, ಹೊಸ ವರ್ಷ ಕ್ಯಾಲೆಂಡರ್ ಕೊಡುವ ಕೆಲಸ ಮಾಡಲಾಗುವುದು. ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಸಹಕಾರದಿಂದ ₹103 ಕೋಟಿ ವೆಚ್ಚದಲ್ಲಿ ಕೆಂಪೇಗೌಡ ಕೋಟೆ ಅಭಿವೃದ್ಧಿ ಮಾಡಲಾಗುತ್ತಿದೆ ಎಂದರು.

₹250 ಕೋಟಿ ಅನುದಾನವನ್ನು ಎತ್ತಿನಹೊಳೆ ಯೋಜನೆಗೆ ಮೀಸಲಿಟ್ಟಿದ್ದು ಅದರ ಮೂಲಕ ತಿಪ್ಪಸಂದ್ರ ಮತ್ತು ಕುದೂರು ಹೋಬಳಿಗೆ ನೀರು ಕೊಡುವ ಕೆಲಸ ಮಾಡಲಾಗುವುದು. ಸತ್ತೇಗಾಲದಿಂದ ಮಾಗಡಿ ಪಟ್ಟಣ, ಮಾಡಬಾಳ್ ಹಾಗೂ ಬಿಡದಿ ಹೋಬಳಿಗಳಿಗೆ ಕಾವೇರಿ ನೀರು ಕೊಡಲಾಗುವುದು. ಹೇಮಾವತಿ ಮೂಲಕ ತಾಲ್ಲೂಕಿನ 63 ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಲಾಗುವುದು ಎಂದರು.

ಇನ್ನು ಮುಂದಿನ ವಾರದಲ್ಲಿ ಹೇಮಾವತಿ ಟ್ರಯಲ್ ರನ್ಗೆ ಚಾಲನೆ ನೀಡಲಾಗುವುದು. ಏಳು ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಲಾಗುತ್ತದೆ. ಈ ಮೂಲಕ ಮಾಗಡಿ ತಾಲ್ಲೂಕಿಗೆ ಮೂರು ಯೋಜನೆಗಳ ಮೂಲಕ ಶಾಶ್ವತ ನೀರಾವರಿ ಯೋಜನೆ ತರಲಾಗುತ್ತಿದೆ ಎಂದರು.

ಮುಂದಿನ ಬಜೆಟ್ನಲ್ಲಿ ಡಿ.ಕೆ.ಸುರೇಶ್ ಅವರು ಒತ್ತಡ ಹಾಕಿ ಕೆಂಪೇಗೌಡರ ಸಮಾಧಿ ಅಭಿವೃದ್ಧಿಗೆ ₹100 ಕೋಟಿ ಅನುದಾನ ಸರ್ಕಾರದಿಂದ ಬಿಡುಗಡೆ ಮಾಡಿಸಿದರೆ ಅಭಿವೃದ್ಧಿಗೊಳ್ಳಲು ಸಾಧ್ಯವಾಗಲಿದೆ ಎಂದರು.

ತಿಪ್ಪಸಂದ್ರ ಹೋಬಳಿ ಹಲವು ಯುವಕ–ಯುವತಿಯರು ಕ್ರಿಕೆಟ್ ಮತ್ತು ವಾಲಿಬಾಲ್ ಪಂದ್ಯಾವಳಿಗಳಲ್ಲಿ ಭಾಗವಹಿಸಿದ್ದರು.

ಬಮೂಲ್ ನಿರ್ದೇಶಕ ಎಚ್.ಎನ್.ಅಶೋಕ್, ಮುಖಂಡರಾದ ಬಿ.ಎಸ್.ಕುಮಾರ್, ಎಂ.ಕೆ.ಧನಂಜಯ್ಯ, ನರಸಿಂಹಮೂರ್ತಿ, ಕೆಂಚೇಗೌಡ, ಶಿವಪ್ರಸಾದ್, ಜೆ.ಪಿ.ಚಂದ್ರೇಗೌಡ, ಕನಕಪುರ ದಿಲೀಪ್, ವಿಶ್ವನಾಥ್, ಮಣಿಗಾನಹಳ್ಳಿ ಸುರೇಶ್, ಗಂಗಾಧರ್, ರೂಪೇಶ್, ಶೈಲಜಾ, ವೆಂಕಟೇಶ್, ಮಂಜೇಶ್, ಕಲ್ಕೆರೆ ಶಿವಣ್ಣ, ರಾಜು, ಜಯಮ್ಮ, ನಾಗಮ್ಮ, ಜಯರಾಂ, ರವೀಶ್, ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.