‘ಬಿಜೆಪಿಯನ್ನು ಬೀದಿಗೆ ತಂದ ಎಚ್‌ಡಿಕೆ’
‘ಎಚ್.ಡಿ. ಕುಮಾರಸ್ವಾಮಿ ಅವರು ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಬೀದಿಗೆ ತಂದು ನಿಲ್ಲಿಸಿದ್ದಾರೆ. ಚುನಾವಣೆಯಲ್ಲಿ ಸಂಖ್ಯೆ ಆಧಾರದ ಮೇಲೆ ಕಾಂಗ್ರೆಸ್ ಮೂರು ಸ್ಥಾನ ಹಾಗೂ ಬಿಜೆಪಿ ಒಂದು ಸ್ಥಾನ ಗೆಲ್ಲುವುದು ಖಚಿತವಾಗಿತ್ತು. ಹೀಗಿದ್ದರೂ ಕೇವಲ 19 ಶಾಸಕರನ್ನು ಇಟ್ಟುಕೊಂಡಿರುವ ಕುಮಾರಸ್ವಾಮಿ ಅವರು ಕುಪೇಂದ್ರ ರೆಡ್ಡಿ ಅವರನ್ನು ಕಣಕ್ಕಿಳಿಸುತ್ತಾರೆಂದರೆ ಏನೆನ್ನಬೇಕೊ? ಚುನಾವಣೆಯಲ್ಲಿ ಬಿಜೆಪಿಯವರು ಅಡ್ಡಮತ ಹಾಕಿದರೆಂದು ದೇಶದಲ್ಲಿ ಚರ್ಚೆಯಾಯಿತು. ಕುಮಾರಸ್ವಾಮಿ ಅವರಿಂದಾಗಿ ಬಿಜೆಪಿಯವರು ಮುಖಭಂಗ ಅನುಭವಿಸುವಂತಾಯಿತು’ ಎಂದು ಬಾಲಕೃಷ್ಣ ಹೇಳಿದರು. ‘ಎಚ್‌ಡಿಕೆ ಎಂದಿಗೂ ಮೈತ್ರಿಯಲ್ಲಿ ಇರುವುದಿಲ್ಲ. ಅವರ ಗರಡಿಯಲ್ಲಿ ಪಳಗಿರುವ ನಮಗಿದು ಚೆನ್ನಾಗಿ ಗೊತ್ತು. ಒಂದು ಕಡೆ ನೆಲೆ ನಿಲ್ಲದ ಅವರು ಅವರನ್ನು ಬಿಟ್ಟು ಇವರ‍್ಯಾರು ಎಂದು ಬೇರೆ ಬೇರೆ ಸ್ನೇಹಿತರನ್ನು ಹುಡುಕಿಕೊಂಡು ಹೋಗುತ್ತಿರುತ್ತಾರೆ’ ಎಂದು ವ್ಯಂಗ್ಯವಾಡಿದರು.