ಮಾಗಡಿ: ತಾಲ್ಲೂಕಿನ ಹನುಮಾಪುರದ ಉಡುಸಲಮ್ಮ ದೇವಾಲಯಕ್ಕೆ ಹಾಕಿದ್ದ ಬೀಗವನ್ನು ಒಡೆದು ಬೋವಿಸಮುದಾಯದವರು ಪೂಜೆ ಸಲ್ಲಿಸಿದರು.
ಗ್ರಾಮದ ಮುಖಂಡ ಕನ್ನಡ ಕುಮಾರ್ ಮಾತನಾಡಿ, ‘ಹಿಂದೆ ಕಲ್ಲು ಚಪ್ಪಡಿಯಿಂದ ಪೂರ್ವಿಕರು ಕಟ್ಟಿಸಿದ್ದ ಉಡುಸಲಮ್ಮ ದೇವಾಲಯವಿತ್ತು. ಭಕ್ತರೆಲ್ಲರೂ ಸೇರಿ ಸುಸಜ್ಜಿತವಾದ ನೂತನ ದೇವಾಲಯ ನಿರ್ಮಿಸಲಾಯಿತು. ನಂತರ ಬೆಂಗಳೂರಿನಲ್ಲಿ ವಾಸ ಇರುವವರು ಟ್ರಸ್ಟ್ ರಚಿಸಿಕೊಂಡು, ಗ್ರಾಮದ ಮೂಲನಿವಾಸಿಗಳ ಗಮನಕ್ಕೆ ತಾರದೆ ದೇವಾಲಯದ ಕಾಣಿಕೆ ಹುಂಡಿ ಹೊಡೆದು ಕೊಂಡೊಯ್ದಿದ್ದಾರೆ’ ಎಂದು ದೂರಿದರು.
‘ಶೇಖದಾರ್ ಎಚ್.ರಾಮಯ್ಯ ಅವರ ಅಜ್ಜಿ ಮತ್ತು ತಾತ ಗೋವಿಂದಪ್ಪ ದೇವಾಲಯ ನಿರ್ಮಿಸಲು ಭೂಮಿ ದಾನ ನೀಡಿದ್ದರು. ಉತ್ಸವಗಳಲ್ಲಿ ಎರಡೂ ಕಡೆಯವರು ಬೇರೆ ಬೇರೆ ಕಡೆ ಅನ್ನದಾಸೋಹ ನಡೆಸಿಕೊಂಡು ಬಂದಿದ್ದಾರೆ. ಭೂಮಿ ದಾನ ನೀಡಿದ್ದ ಎಚ್.ರಾಮಯ್ಯ ಅವರ ಮೊಮ್ಮಗ ಪುನೀತ್ ದೇವಾಲಯದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಅವರ ಗಮನಕ್ಕೆ ತಾರದೆ ಹೊರಗಿನವರು ದೇವಾಲಯಕ್ಕೆ ಬೀಗ ಹಾಕಿದ್ದರು. ಸ್ಥಳೀಯರಾದ ನಾವು ಬೀಗ ಒಡೆದು ಪೂಜೆ ಸಲ್ಲಿಸಿದ್ದೇವೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.