ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ, ಗಾಳಿಗೆ ಹಾರಿದ ಮೇಲ್ಚಾವಣಿ

Last Updated 16 ಏಪ್ರಿಲ್ 2021, 4:32 IST
ಅಕ್ಷರ ಗಾತ್ರ

ಕನಕಪುರ: ತಾಲ್ಲೂಕಿನ ಸಾತನೂರು ಹೋಬಳಿಯ ಅಚ್ಚಲು ಗ್ರಾಮದಲ್ಲಿ ಬುಧವಾರ ರಾತ್ರಿ ಸುರಿದ ಮಳೆ ಮತ್ತು ಬಿರುಗಾಳಿಗೆ ಕೆಲವು ಮನೆಗಳ ಮೇಲ್ಚಾವಣಿ ಹಾರಿ ಹೋಗಿದ್ದು, ಅಪಾರ ನಷ್ಟವಾಗಿದೆ.

ಅಚ್ಚಲು ಗ್ರಾಮದ ಲಕ್ಷ್ಮಿ ಮತ್ತು ನಾಗಮ್ಮ ಎಂಬುವರ ಮನೆಗಳು ಹಾನಿಗೀಡಾಗಿವೆ. ಮನೆಯ ಮೇಲ್ಚಾವಣಿ ಹಾರಿ ಹೋಗಿರುವುದು ಒಂದೆಡೆಯಾದರೆ, ಮೇಲ್ಚಾವಣಿ ಇಲ್ಲದೆ ಮನೆಯೊಳಗಿನ ಧವಸ ಧಾನ್ಯ ಮಳೆಗೆ ಸಿಲುಕಿ ನಾಶವಾಗಿವೆ.

ಪ್ರಕೃತಿ ವಿಕೋಪಕ್ಕೆ ಸಿಲುಕಿ ನಷ್ಟ ಅನುಭವಿಸಿರುವ ಕುಟುಂಬಕ್ಕೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕೆಂದು ಅಚ್ಚಲು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಮರಕ್ಕೆ ಸಿಡಿಲು ಬಡಿದು ಹಾನಿ: ತಾಲ್ಲೂಕಿನ ಬರಡನಹಳ್ಳಿ ಗ್ರಾಮದಲ್ಲಿ ಬುಧವಾರ ರಾತ್ರಿ ಸಿಡಿಲು ಬಡಿದು ಮರವೊಂದು ನೂರಾರು ಚೂರುಗಳಾಗಿದ್ದು, ನೂರೈವತ್ತು ಮೀಟರ್‌ ದೂರಕ್ಕೆ ಹೋಗಿ ಬಿದ್ದಿವೆ.

ಬರಡನಹಳ್ಳಿ ಗ್ರಾಮದ ಬಿ.ಎಸ್‌. ಪರಶಿವಯ್ಯ ಎಂಬುವರಿಗೆ ಸೇರಿದ ಸುಮಾರು 30 ವರ್ಷದ ಸಿಲ್ವರ್‌ ಮರಕ್ಕೆ ಸಿಡಿಲು ಬಡಿದಿದೆ. ಗುರುವಾರ ಜಮೀನಿನ ಕಡೆ ಹೋದಾಗ ಈ ಘಟನೆ ಬೆಳಕಿಗೆ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT