‘ನಿಯಮಾನುಸಾರ ಪಾವತಿ’
‘ಪುರಸಭೆಯ 71 ನೌಕರರ ಬಾಕಿ ವೇತನ ಪಾವತಿಗೆ ಕಾರ್ಮಿಕ ಕೋರ್ಟ್ ಆದೇಶದ ಜೊತೆಗೆ, ಪೌರಾಡಳಿತ ನಿರ್ದೇಶನಾಲಯ ಸಹ ಪುರಸಭೆ ನಿಧಿಯಿಂದ ಬಾಕಿ ಮೊತ್ತ ಪಾವತಿಸುವಂತೆ ಆದೇಶಿಸಿದೆ. ಅದರಂತೆ, ಯೋಜನಾ ನಿರ್ದೇಶಕರು ಹಾಗೂ ಪುರಸಭೆಯ ಹಿಂದಿನ ಅಧ್ಯಕ್ಷರ ಆದೇಶದ ಮೇರೆಗೆ, ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ 23 ವಾಟರ್‌ಮ್ಯಾನ್‌ಗಳಿಗೆ ನಿಯಮಾನುಸಾರ ಬಾಕಿ ಮೊತ್ತ ₹1.65 ಕೋಟಿ ಪಾವತಿಸಲಾಗಿದೆ. ಕೋರ್ಟ್ ಆದೇಶ ಪಾಲಿಸಿ ಅನುಪಾಲನ ವರದಿ ಸಲ್ಲಿಸಲು ಕ್ರಮ ಕೈಗೊಳ್ಳಲಾಗಿದೆ. ಎಲ್ಲಾ ಪ್ರಕ್ರಿಯೆ ಪಾರದರ್ಶಕವಾಗಿ ನಡೆದಿದೆ. ನೌಕರರಿಂದ ನಾನು ಕಿಕ್‌ಬ್ಯಾಕ್ ಪಡೆದಿದ್ದೇನೆ ಎಂಬ ಆರೋಪ ಸುಳ್ಳು’ ಎಂದು ತಮ್ಮ ವಿರುದ್ಧದ ಆರೋಪಗಳ ಕುರಿತು ಪುರಸಭೆ ಮುಖ್ಯಾಧಿಕಾರಿ ಎಂ. ಮೀನಾಕ್ಷಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.