ರಾಮನಗರ: ನಗರಸಭೆ ವ್ಯಾಪ್ತಿಯಲ್ಲಿ ಅರ್ಕಾವತಿ ನದಿಗೆ ಅಡ್ಡವಾಗಿ ನಿರ್ಮಿಸುತ್ತಿರುವ ಸೇತುವೆ ಕಾಮಗಾರಿ ಸೇರಿದಂತೆ ನಗರದ ವಾರ್ಡ್ಗಳಲ್ಲಿ ಯುಐಡಿಎಫ್ (ನಗರ ಮೂಲಸೌಕರ್ಯ ಅಭಿವೃದ್ಧಿ ನಿಧಿ) ಅನುದಾನದಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕೆಲಸಗಳನ್ನು ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ, ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ, ಪೌರಾಯುಕ್ತ ಡಾ. ಜಯಣ್ಣ ಅವರು ಸೋಮವಾರ ವೀಕ್ಷಿಸಿದರು.

ಬಳಿಕ ಮಾತನಾಡಿದ ಶೇಷಾದ್ರಿ ಶಶಿ, ‘2021–22ರ ವಿಶೇಷ ಅನುದಾನದಡಿ ₹3.75 ಕೋಟಿ ವೆಚ್ಚದಲ್ಲಿ ಅರ್ಕಾವತಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸಲಾಗುತ್ತಿದೆ. ಕಾಮಗಾರಿ ಪೂರ್ಣಗೊಂಡರೆ, ಕಾಯಿಸೊಪ್ಪಿನ ಬೀದಿಯಿಂದ ವಿವೇಕಾನಂದ ನಗರಕ್ಕೆ ಸಂಪರ್ಕ ವ್ಯವಸ್ಥೆಯಾಗುತ್ತದೆ. ಇದರಿಂದಾಗಿ ಜನರು ಬಳಸಿಕೊಂಡು ಬರುವುದು ತಪ್ಪುತ್ತದೆ’ ಎಂದರು.

‘ಬೆಂಗಳೂರು ನಗರಕ್ಕೆ ಸಮೀಪದಲ್ಲಿರುವ ರಾಮನಗರ ಜಿಲ್ಲಾ ಕೇಂದ್ರವು ಪ್ರವಾಸಕ್ಕೆ ಹೇಳಿ ಮಾಡಿಸಿದಂತಿದೆ. ಹಾಗಾಗಿ ರಂಗರಾಯರದೊಡ್ಡಿ ಕೆರೆಯಲ್ಲಿ ಬೋಟಿಂಗ್ ವ್ಯವಸ್ಥೆ ಮಾಡಲಾಗುವುದು. ಜೊತೆಗೆ ನಗರದ ಬೋಳಪ್ಪನಹಳ್ಳಿ ಕೆರೆ, ಅಮಾನಿಕೆರೆ ಅಭಿವೃದ್ಧಿ ಮಾಡಿ, ಅಲ್ಲಿಯೂ ನಡಿಗೆ ಪಥ ಸೇರಿದಂತೆ ಇತರ ಚಟುವಟಿಕೆ ಕೈಗೊಳ್ಳುವ ಆಲೋಚನೆ ಇದೆ’ ಎಂದು ತಿಳಿಸಿದರು.

ಶಾಂತಿಲಾಲ್ ಬಡಾವಣೆಗೆ ಹೋಗುವ ಮುಖ್ಯ ರಸ್ತೆ, ವಿವೇಕಾನಂದನಗರ ರಾಯರ ದೊಡ್ಡಿ ಮುಖ್ಯ ರಸ್ತೆ, ಯುಐಡಿಎಫ್ನಡಿ ನಡೆಯುತ್ತಿರುವ ರಸ್ತೆ, ಚರಂಡಿ ಹಾಗೂ ಮಳೆ ಹಾನಿಯಿಂದ ಗುಂಡಿ ಬಿದ್ದಿರುವ ರಸ್ತೆಗಳನ್ನು ವೀಕ್ಷಿಸಿದರು. ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಕೂಡಲೇ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಿಸಿ ಸಾರ್ವಜನಿಕರ ಓಡಾಟಕ್ಕೆ ಅನುವು ಮಾಡಿ ಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರಾಭಿದ್ಧಿ ಕೋಶದ ಯೋಜನಾಧಿಕಾರಿ ಶೇಖರ್, ನಗರಸಭೆಯ ಎಇಇ ವಿಶ್ವನಾಥ್, ಎಂಜಿನಿಯರ್ ನಿರ್ಮಲ, ಮುಖಂಡರಾದ ಲಕ್ಷ್ಮಿಕಾಂತ್, ಶ್ರೀನಿವಾಸ್, ಕಬಡ್ಡಿ ವಿಜಿ, ನಾರಾಯಣಪ್ಪ, ಶಿವರಾಜು ಹಾಗೂ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.