ಶುಕ್ರವಾರ, ನವೆಂಬರ್ 22, 2019
19 °C

ನ್ಯಾಯಾಲಯಕ್ಕೆ ಡಿಕೆಶಿ ಹಾಜರು: ರಾಮನಗರ ಜಿಲ್ಲೆಯಾದ್ಯಂತ ಬಿಗಿ ಬಂದೋಬಸ್ತ್

Published:
Updated:

ರಾಮನಗರ: ಇ.ಡಿ. ವಶದಲ್ಲಿ ಇರುವ ಶಾಸಕ ಡಿ.ಕೆ. ಶಿವಕುಮಾರ್ ಅವರನ್ನು ಶುಕ್ರವಾರ ದೆಹಲಿಯಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಪ್ರತಿಭಟನೆಗಳು ನಡೆಯುವ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಜಿಲ್ಲೆಯಾದ್ಯಂತ ಬಿಗಿ‌ ಬಂದೋಬಸ್ತ್ ಕೈಗೊಂಡಿದ್ದಾರೆ. 
 
1 ಎಸ್ಪಿ, 5 ಡಿವೈಎಸ್ಪಿ, 10 ಸರ್ಕಲ್ ಇನ್ ಸ್ಪೆಕ್ಟರ್, 21 ಎಸ್ ಐ, 50 ಎ ಎಸ್ ಐ, 400 ಕಾನ್ ಸ್ಟೆಬಲ್ ಹಾಗೂ ತಲಾ 4 ಡಿಎಆರ್,  ಕೆ ಎಸ್ ಆರ್ ಪಿ ತುಕಡಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ. 

‘ಜಿಲ್ಲೆಯಲ್ಲಿ ಯಾವುದೇ ಪ್ರತಿಭಟನೆಗೆ ಅನುಮತಿ ನೀಡಿಲ್ಲ. ಗಲಾಟೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ರಾಮನಗರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನೂಪ್ ಶೆಟ್ಟಿ ತಿಳಿಸಿದ್ದಾರೆ. 

ಪ್ರತಿಕ್ರಿಯಿಸಿ (+)