ರಾಮನಗರ: 2025-26ನೇ ಸಾಲಿನ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟವನ್ನು ಸೆ. 1ರಂದು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. ಕುಸ್ತಿ, ಲಾನ್ ಟೆನ್ನಿಸ್ ಮತ್ತು ಟೇಬಲ್ ಟೆನ್ನಿಸ್ ಕ್ರೀಡೆಗಳನ್ನು ಕನಕಪುರ ತಾಲ್ಲೂಕು ಕ್ರೀಡಾಂಗಣದಲ್ಲಿ ಆ. 29ರಂದು ಏರ್ಪಡಿಸಲಾಗಿದೆ.

ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು ಈಗಾಗಲೇ ಬೆಂಗಳೂರು ದಕ್ಷಿಣ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಸಂಘಟಿಸಲಾಗಿದೆ. ವೈಯಕ್ತಿಕ ಕ್ರೀಡೆಗಳಲ್ಲಿ ಭಾಗವಹಿಸಿ ವಿಜೇತರಾದ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದವರು ಹಾಗೂ ಗುಂಪು ಕ್ರೀಡೆಗಳಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದವರು ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಬೇಕಾಗಿರುತ್ತದೆ.

ಜಿಲ್ಲಾ ಮಟ್ಟದಲ್ಲಿ ಸಂಘಟಿಸಲಾಗುತ್ತಿರುವ ಕ್ರೀಡೆಗಳ ವಿವರ: ಅಥ್ಲೆಟಿಕ್ಸ್, ವಾಲಿಬಾಲ್, ಫುಟ್ಬಾಲ್, ಖೋ-ಖೋ, ಕಬಡ್ಡಿ, ಬಾಸ್ಕೆಟ್ ಬಾಲ್, ಕುಸ್ತಿ, ಬ್ಯಾಡ್ಮಿಂಟನ್, ಹಾಕಿ, ಹ್ಯಾಂಡ್ಬಾಲ್, ಟೇಬಲ್ ಟೆನ್ನಿಸ್, ಥ್ರೋಬಾಲ್, ಬಾಲ್ ಬ್ಯಾಡ್ಮಿಂಟನ್ ಹಾಗೂ ಯೋಗಾಸನ ಆಯೋಜಿಸಲಾಗಿದೆ.

ಕುಸ್ತಿ, ಲಾನ್ ಟೆನ್ನಿಸ್ ಹಾಗೂ ಟೇಬಲ್ ಟೆನ್ನಿಸ್ ಕ್ರೀಡೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳು ಕನಕಪುರ ತಾಲ್ಲೂಕು ಕ್ರೀಡಾಂಗಣದಲ್ಲಿ ಆ. 29ರಂದು ವರದಿ ಮಾಡಿಕೊಳ್ಳಬೇಕು. ಜಿಲ್ಲಾ ಮಟ್ಟದಲ್ಲಿ ಆಯ್ಕೆ ಮಾಡಲಾಗಿರುವ ಕ್ರೀಡೆಗಳಿಗೆ ಯಾವುದೇ ಟ್ರೋಫಿ ಮತ್ತು ಪದಕ ನೀಡಲಾಗುವುದಿಲ್ಲ.

ಕ್ರೀಡೆಗಳಲ್ಲಿ ಭಾಗವಹಿಸುವ ಕ್ರೀಡಾಪಟುಗಳು ಆನ್ಲೈನ್ ಮೂಲಕ ನೋಂದಾಯಿಸುವ ಸಮಯದಲ್ಲಿ ತಮ್ಮ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಪ್ರತಿ/ಸರ್ಕಾರದಿಂದ ನೀಡಲಾದ ಸ್ಥಳೀಯ ದೃಢೀಕರಣದ ದಾಖಲಾತಿಗಳನ್ನು ಕಡ್ಡಾಯವಾಗಿ ಅಪ್ಲೋಡ್ ಮಾಡಬೇಕು.

ಜಿಲ್ಲೆಗೆ ಒಳಪಡುವ ತಾಲ್ಲೂಕಿನವರು ಮಾತ್ರ ಭಾಗವಹಿಸಬೇಕು. ಬೇರೆ ಜಿಲ್ಲೆ/ತಾಲ್ಲೂಕುಗಳಿಂದ ಭಾಗವಹಿಸುವ ಸಂದರ್ಭದಲ್ಲಿ ಅಂದರೆ, ಯಾವುದೇ ಕ್ರೀಡಾಪಟುವಿನ ಸ್ವಂತ ಸ್ಥಳ ಬೇರೆ ತಾಲ್ಲೂಕು, ಜಿಲ್ಲೆಯಾಗಿದ್ದು, ಆ ಕ್ರೀಡಾಪಟು ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಲ್ಲಿ, ನೌಕರರಾಗಿದ್ದಲ್ಲಿ ಅಂತಹ ಕ್ರೀಡಾಪಟುಗಳು ಶಾಲಾ, ಕಾಲೇಜಿನ ಗುರುತಿನ ಚೀಟಿ, ನೌಕರರ ಸಂಸ್ಥೆಯ ಗುರುತಿನ ಚೀಟಿ ಹಾಗೂ ಸರ್ಕಾರದಿಂದ ಅಧಿಕೃತ ಇರುವ ಇತರೇ ಗುರುತಿನ ಚೀಟಿಗಳನ್ನು ಆನ್ಲೈನ್ನಲ್ಲಿ ನೊಂದಣಿ ಮಾಡುವುದು ಕಡ್ಡಾಯ. ಆನ್ಲೈನ್ ವೆಬ್ಸೈಟ್ https://dasaracmcup-2025.etrpindia.com/KA-sports ಈ ವೆಬ್ಸೈಟ್ ಆ. 25ರ ನಂತರ ತೆರೆಯಲಾಗುವುದು.

ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬೆಂಗಳೂರು ದಕ್ಷಿಣ ಜಿಲ್ಲೆ. ಇವರನ್ನು ಖುದ್ದಾಗಿ ಭೇಟಿ ಮೂಲಕ ಅಥವಾ ಅಥ್ಲೇಟಿಕ್ಸ್ ತರಬೇತುದಾರರ ದೂ.ಸಂಖ್ಯೆ: 8494830078 ಅಥವಾ ಅಧೀಕ್ಷಕರ ದೂ: 9945533431 ಸಂಪರ್ಕಿಸಬೇಕು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.