ಮಂಗಳವಾರ, ಜನವರಿ 21, 2020
27 °C

ರೇವ್‌ ಪಾರ್ಟಿ: ಯುವತಿಯರು ಸೇರಿ ಹತ್ತು‌ ಮಂದಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ತಾಲ್ಲೂಕಿನ ವಿಭೂತಿಕೆರೆ ಗ್ರಾಮದ ಮಾವಿನ ತೋಟವೊಂದರಲ್ಲಿ ರೇವ್ ಪಾರ್ಟಿ ಮಾಡುತ್ತಿದ್ದವರ ಮೇಲೆ ಪೊಲೀಸರು ಶನಿವಾರ ತಡರಾತ್ರಿ ನಡೆಸಿದ್ದು, ಹತ್ತು ಮಂದಿಯನ್ನು ಬಂಧಿಸಿದ್ದಾರೆ.

ಬೆಂಗಳೂರಿನ ವೆಂಕಟೇಶ್ ಎಂಬುವರಿಗೆ ಸೇರಿದ 32 ಎಕರೆ ಮಾವಿನ ತೋಟದ ಮಧ್ಯೆ ಶಾಮಿಯಾನ ಹಾಕಿ, ದೊಡ್ಡ ಧ್ವನಿವರ್ಧಕಗಳನ್ನು ಬಳಸಿ ಪಾರ್ಟಿ ಮಾಡಲಾಗುತಿತ್ತು. ಬೆಂಗಳೂರಿನ ಜೊತೆಗೆ ತಮಿಳುನಾಡು, ಕೇರಳದಿಂದ ಐದುನೂರಕ್ಕೂ ಹೆಚ್ಚು ಯುವಕ ಯುವತಿಯರು ಪಾಲ್ಗೊಂಡಿದ್ದರು. ಆ್ಯಪ್ ಮೂಲಕ ಟಿಕೆಟ್ ಬುಕ್ಕಿಂಗ್ ಮಾಡಲಾಗಿತ್ತು. ಆದರೆ ಕಾರ್ಯಕ್ರಮ ಆಯೋಜನೆಗೆ ಪೊಲೀಸರಿಂದ ಯಾವುದೇ ಅನುಮತಿ ಪಡೆದಿರಲಿಲ್ಲ. 

ಎಸ್ಪಿ ಅನೂಪ್ ಶೆಟ್ಟಿ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದರು. ಈ ವೇಳೆ ಧ್ವನಿ ವರ್ಧಕ, ಮದ್ಯದ ಬಾಟಲಿಗಳು, ಕ್ಯಾಮೆರಾ ಮೊದಲಾದ ಸಾಮಗ್ರಿಗಳನ್ನು ವಶಕ್ಕೆ ಪಡೆದರು. ಆಯೋಜಕರಾದ ಮಧುಮಿತ, ಪೌರಾಣಿಕ್, ಪುರೋಹಿತ್, ನಬಿರಾ, ರಿಚು ಸೇರಿದಂತೆ ಹತ್ತು ಮಂದಿಯನ್ನು ಬಂಧಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು