ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯೋಗೇಶ್ವರ್, 1999 ರಲ್ಲಿ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದಾಗ ಶಿವಕುಮಾರ್ ನನಗೆ ಕಾಂಗ್ರೆಸ್ ಟಿಕೆಟ್ ತಪ್ಪಿಸಿದರು. ಚನ್ನಪಟ್ಟಣದ ನೀರಾವರಿಗಾಗಿ ಬಿಜೆಪಿ ಸೇರಿದ ನಾನು 2013 ರಲ್ಲಿ ಬಿಜೆಪಿ ಮೂರು ಭಾಗವಾದಾಗ ನನ್ನ ಅಸ್ಥಿತ್ವಕ್ಕಾಗಿ ಮತ್ತೆ ಕಾಂಗ್ರೆಸ್‍ಗೆ ಬಂದೆ. ಆಗಲೂ ಇದೇ ವ್ಯಕ್ತಿ ಮತ್ತೊಮ್ಮೆ ಟಿಕೆಟ್ ತಪ್ಪಿಸಿದರು. ಕಳೆದ 25 ವರ್ಷಗಳಿಂದ ನನಗೆ ಕಿರುಕುಳ ಕೊಟ್ಟುಕೊಂಡು ಬಂದಿದ್ದಾರೆ. ಅವರ ಜೊತೆಗೆ ನಾನು ಹೇಗೆ ಹೋಗಲಿ. ಕಾಂಗ್ರೆಸ್ ಸೇರಲಾರೆ’ ಎಂದು ಹೇಳಿದರು.