ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡದಿ: ಹೂ ಮಾರಾಟಗಾರರಿಗೆ ವಿಶೇಷ ಭತ್ಯೆಗೆ ಆಗ್ರಹ

Last Updated 26 ಮೇ 2021, 2:56 IST
ಅಕ್ಷರ ಗಾತ್ರ

ಬಿಡದಿ: ಬೆಂಗಳೂರು –ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಕೋತಿ ಆಂಜನೇಯ ಸ್ವಾಮಿ ದೇವಾಲಯಕ್ಕೆ ದಿನನಿತ್ಯ ಸಂಚರಿಸುವ ಸಾವಿರಾರು ಪ್ರಯಾಣಿಕರು ಹಾಗೂ ಸ್ಥಳೀಯ ಭಕ್ತಾದಿಗಳು ಪೂಜೆ ಸಲ್ಲಿಸುತ್ತಿರುವುದು ವಾಡಿಕೆ. ಕೋವಿಡ್ -19 ನಿಂದ ದೇವಾಲಯಗಳು ಬಾಗಿಲು ಮುಚ್ಚಿರುವುದರಿಂದ ಸುಮಾರು 10 ಮಳಿಗೆಗಳ ಹೂ ಮಾರಾಟಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

‘ಹೂವಿಗೆ ಎಲ್ಲಿಲ್ಲದೆ ಬೇಡಿಕೆ ಇತ್ತು. ಹೂವನ್ನು ದಿನನಿತ್ಯವೂ ಮದುವೆಗಳು, ಸಾರ್ವಜನಿಕ ಸಮಾರಂಭಗಳು, ಹೊಸ ವಾಹನಗಳ ಪೂಜೆ ಕಾರ್ಯಗಳಿಗೆ ದಿನನಿತ್ಯ ₹6 ಸಾವಿರ ವ್ಯವಹಾರ ಮಾಡಿ ಜೀವನ ಸಾಗಿಸುತ್ತಿದ್ದೆವು’ ಎಂದು ವ್ಯಾಪಾರಿಗಳು ಹೇಳಿದರು.

‘ಕೋವಿಡ್‌ನಿಂದ ಯಾರೂ ಹೂ ಖರೀದಿಸುತ್ತಿಲ್ಲ. ಪೂಜೆ ಕಾರ್ಯಕ್ರಮ ಇಲ್ಲದಿರುವುದರಿಂದ ಹೂ ಖರೀದಿ ಮಾಡಲು ಯಾರು ಮುಂದೆ ಬರುತ್ತಿಲ್ಲ. ಈ ಹೂ ಮಾರಾಟದ ವೃತ್ತಿಯನ್ನು 10 ರಿಂದ 15 ವರ್ಷಗಳಿಂದಲೂ ಮಾಡಿಕೊಂಡು ಜೀವನ ನಡೆಸುತ್ತಿದ್ದವು’ ಎಂದು ಲಕ್ಷ್ಮಮ್ಮ ಅಳಲನ್ನು ತೋಡಿಕೊಂಡರು.

‘ಈ ವೃತ್ತಿಯಿಂದ ನಾವು ಕುಟುಂಬ ನಿರ್ವಹಣೆ ಮಾಡುತ್ತಿರುವುದು
ಬಹಳ ಕಷ್ಟಕರವಾಗಿದೆ. ಜೊತೆಗೆ ನಾವು ಹೂ ಖರೀದಿ ಮಾಡಲು ಪಟ್ಟಣಕ್ಕೆ ಹೋಗಲು
ಸಾಧ್ಯವಾಗುತ್ತಿಲ್ಲ. ಸ್ಥಳೀಯರಿಂದ ಹೂ ಖರೀದಿ ಮಾಡಿ ಜೀವನ ನಡೆಸುವುದಕ್ಕೆ ಆಗುವುದಿಲ್ಲ. ನಮಗೆ ಅತಂತ್ರ ಸ್ಥಿತಿ ನಿರ್ಮಾಣವಾಗಿದ್ದು, ಜೀವನ ನಡೆಸಲು ಕಷ್ಟಕರವಾಗಿದೆ. ಕೂಡಲೇ ಸರ್ಕಾರ ನಮಗೆ ವಿಶೇಷ ಭತ್ಯೆಯನ್ನು ಘೋಷಿಸಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT