ಹಾರೋಹಳ್ಳಿ: ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ 1500 ಮಕ್ಕಳು ಮೂಲ ಸೌಲಭ್ಯಗಳ ಕೊರತೆಯಿಂದಾಗಿ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಇಡೀ ಶಾಲೆಗೆ ಕೇವಲ ನಾಲ್ಕು ಶೌಚಾಲಯಗಳು ಮಾತ್ರ ಇವೆ. ಈ ಶೌಚಾಲಯಗಳು ಕೂಡ ಸರಿಯಾದ ನಿರ್ವಹಣೆ ಇಲ್ಲದೆ ಹಾಳಾಗಿವೆ.

ಶಾಲೆಯಲ್ಲಿ ಶೌಚಾಲಯದ ಸಮಸ್ಯೆ ಮಾತ್ರವಲ್ಲ; ಕುಡಿಯುವ ನೀರು, ಶಿಕ್ಷಕರ ಕೊರತೆಯೂ ಇದೆ. ತರಗತಿ ಕೊಠಡಿಗಳ ಅಭಾವ ಮತ್ತು ಭೋಜನಾಲಯವೂ ಇಲ್ಲ. ಊಟ ಮಾಡಲು ಪ್ರತ್ಯೇಕ ಸ್ಥಳವಿಲ್ಲದ ಕಾರಣ ಮಕ್ಕಳು ಕ್ರೀಡಾಂಗಣದಲ್ಲೇ ಊಟ ಮಾಡಬೇಕಾದ ಸ್ಥಿತಿ ಇದೆ.

ಕಳೆದ ಆರು ತಿಂಗಳಿಂದ ಎಸ್ಡಿಎಂಸಿ ಸಮಿತಿಗೆ ಅನುದಾನ ಬರದ ಕಾರಣ ಶುಚಿಗಾರರಿಗೆ ಸಂಬಳ ನೀಡಲಾಗುತ್ತಿಲ್ಲ. ಇದರ ಪರಿಣಾಮ ಶೌಚಾಲಯಗಳ ನಿರ್ವಹಣೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ ಎನ್ನುತ್ತಾರೆ ಪ್ರಾಂಶುಪಾಲರು.

ಶಾಲೆಯ ಅವ್ಯವಸ್ಥೆಗೆ ಎಸ್.ಡಿ.ಎಂ.ಸಿ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಾಲೆಯ ಸೂಚಕರು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಸೂಚಕರ ಮಕ್ಕಳು ಖಾಸಗಿ ಶಾಲೆಗಳಲ್ಲಿ ಓದುತ್ತಿರುವುದರಿಂದ ಸರ್ಕಾರಿ ಶಾಲೆ ಮಕ್ಕಳ ಸಮಸ್ಯೆಗಳ ಬಗ್ಗೆ ಅವರಿಗೆ ಅರಿವಿಲ್ಲ. ಅಸಮರ್ಥ ಸೂಚಕರನ್ನು ಬದಲಾಯಿಸುವಂತೆ ಶಿಕ್ಷಣ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.

ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜವಿಲ್ಲ. ಸಂಬಂಧಪಟ್ಟವರು ಇತ್ತ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು.
ಮಂಜುನಾಥ್. ಎಸ್.ಡಿ.ಎಂ.ಸಿ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.