ರಾಮನಗರ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿಜ್ಞಾನ ವಿಭಾಗ ವಿದ್ಯಾರ್ಥಿನಿ ಸೌಂದರ್ಯ ಕನ್ನಡ ಭಾಷೆಯಲ್ಲಿ ಬೆಂಗಳೂರು ವಿ.ವಿ.ಯಲ್ಲಿ ಚಿನ್ನದ ಪದಕ ಕೊರಳಿಗೇರಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.

ಸದ್ಯ ಪದವಿ ಮುಗಿಸಿ, ಬಿ.ಇಡಿ ಓದುತ್ತಿರುವ ಸೌಂದರ್ಯ ಮೂಲ ವಿಜ್ಞಾನ ವಿದ್ಯಾರ್ಥಿನಿ. ಅವರು ಕನ್ನಡದಲ್ಲಿ ನಾಲ್ಕು ಸೆಮಿಸ್ಟರ್ಗಳಲ್ಲಿ 400 ಅಂಕಗಳಿಗೆ 380 ಅಂಕ ಪಡೆಯುವ ಮೂಲಕ ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ರಾಮನಗರ ತಾಲ್ಲೂಕಿನ ಅಮ್ಮನಪುರ ಗ್ರಾಮದವರಾಗಿರುವ ಸೌಂದರ್ಯ ಬಿ.ಇಡಿ ಮುಗಿಸಿ, ಅರ್ಗೇನಿಕ್ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆಯುವ ಬಯಕೆ ಹೊಂದಿದ್ದು, ಸಂಶೋಧನಾ ವಿಭಾಗದಲ್ಲಿ ಮುಂದುವರೆಯಬೇಕೆಂಬ ಆಶಯ ಅವರದ್ದು.

ಈಕೆಗೆ ಸಾಧನೆ ಬಗ್ಗೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ರಾಜಶೇಖರ ಮೆಚ್ಚುಗೆ ವ್ಯಕ್ತಪಡಿಸಿದ್ದು, ಮೂಲ ವಿಜ್ಞಾನದ ವಿದ್ಯಾರ್ಥಿ ಕನ್ನಡ ಭಾಷೆಯಲ್ಲಿ ಚಿನ್ನದ ಪದಕ ಪಡೆದಿರುವುದು ಹೆಮ್ಮೆಯ ವಿಷಯವಾಗಿದೆ. ಈಕೆ ಇತರರಿಗೆ ಮಾದರಿ ಎಂದರು. ಕಾಲೇಜಿನ ಪ್ರಾಚಾರ್ಯ ಕಿಶೋರ್ ಹಾಗು ಉಪನ್ಯಾಸಕರು ಆಕೆಯನ್ನು ಅಭಿನಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.