ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಕ ಗಳಿಕೆ ಜೀವನ ಗುರಿ ಅಲ್ಲ: ಸೋಮಶೇಖರಯ್ಯ ಕಿವಿಮಾತು

ಪ್ರತಿಭಾ ಪುರಸ್ಕಾರ ಹಾಗೂ ಶಿಕ್ಷಕರ ದಿನಾಚರಣೆ
Last Updated 7 ಸೆಪ್ಟೆಂಬರ್ 2020, 2:52 IST
ಅಕ್ಷರ ಗಾತ್ರ

ಚನ್ನಪಟ್ಟಣ: ವಿದ್ಯಾರ್ಥಿಗಳು ಚಿಕ್ಕಂದಿನಲ್ಲಿಯೇ ನಿರ್ದಿಷ್ಟ ಯೋಜನೆ ರೂಪಿಸಿಕೊಂಡು ಮಾನಸಿಕ, ದೈಹಿಕವಾಗಿ ಸದೃಢರಾಗಿ ಪರಿಪೂರ್ಣ ವ್ಯಕ್ತಿತ್ವದೊಂದಿಗೆ ಸರ್ವತೋಮುಖ ಬೆಳವಣಿಗೆ ಸಾಧಿಸಬೇಕು ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸೋಮಶೇಖರಯ್ಯ ಕಿವಿಮಾತು ಹೇಳಿದರು.

ಪಟ್ಟಣದ ಬಿ.ಜೆ.ಎಲ್ ಪಬ್ಲಿಕ್ ಶಾಲೆಯಲ್ಲಿ ಭಾರತ್ ವಿಕಾಸ್ ಪರಿಷತ್ ಕಣ್ವ ಶಾಖೆ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ 2019-20ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ತಾಲ್ಲೂಕಿನಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಹಾಗೂ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಜೀವನದ ಪ್ರತಿಯೊಂದು ಕ್ಷಣ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಧ್ಯಾನಿಸಿದ ಡಾ.ಎಸ್. ರಾಧಾಕೃಷ್ಣನ್ ಒಬ್ಬ ಆದರ್ಶ ಶಿಕ್ಷಕ. ಮೌಲ್ಯಗಳಿಗೆಸಾಕ್ಷಿಯಾಗಿದ್ದಾರೆ. ಅವರ ಆದರ್ಶ ತತ್ವದ ಅನುಷ್ಠಾನವೇ ಅವರಿಗೆ ಸಲ್ಲಿಸುವ ನಿಜವಾದ ಗುರುನಮನ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜು ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಗೂ ಅನಂತ ಭವಿಷ್ಯವಿರುತ್ತದೆ. ಸತತ ಪರಿ
ಶ್ರಮ ಮತ್ತು ಅಭ್ಯಾಸ ಮತ್ತು ಸ್ಪಷ್ಟ ಗುರಿಯೊಂದಿಗೆ ಸಾಧನೆ ಹಾದಿ ತಲುಪಬೇಕು. ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದರೆ ಎಲ್ಲವನ್ನೂ ಸಾಧಿಸಿ
ದಂತೆ ಆಗುವುದಿಲ್ಲ. ಅದರೊಂದಿಗೆ ಜೀವನ ಕಲೆ ಕರಗತ ಮಾಡಿಕೊಂಡು, ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು ಎಂದರು.

ಭಾ.ವಿ.ಪ ಪ್ರಾಂತ ಸಂಚಾಲಕ ಡಿ.ಪಿ.ಸ್ವಾಮಿ ಮಾತನಾಡಿ, ಭಾರತ್ ವಿಕಾಸ್ ಪರಿಷತ್ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಸಮಾಜದಲ್ಲಿ ಉನ್ನತ ಸ್ಥಾನ ತಲುಪಲು ಸಹಕಾರ ನೀಡುತ್ತಾ ಬರುತ್ತಿದೆ. ಸಂಸ್ಥೆಯ ಈ ಪ್ರೋತ್ಸಾಹ ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಭಾ.ವಿ.ಪ ಅಧ್ಯಕ್ಷ ವಸಂತ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆ ಪತ್ರಿಕಾ ಕಾರ್ಯದರ್ಶಿ ಯೋಗೇಶ್ ಚಕ್ಕೆರೆ ಮಾತನಾಡಿದರು. ಕ್ಷೇತ್ರ ಸಮನ್ವಯಾಧಿಕಾರಿ ಕುಸುಮಲತಾ, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ್, ಚಂದ್ರು ಡಯೋಗ್ನೋಸಿಕ್ ಸೆಂಟರ್ ಮಾಲೀಕ ಚಂದ್ರೇಗೌಡ, ಶಿಕ್ಷಣ ಸಂಯೋಜಕ ತಮ್ಮಣ್ಣ, ನಿವೃತ್ತ ಉಪ ಪ್ರಾಂಶುಪಾಲ ಕೆಂಪೇಗೌಡ, ಪದಾಧಿಕಾರಿಗಳಾದ ತಿಪ್ರೇಗೌಡ, ಗೋವಿಂದಯ್ಯ ಹಾಜರಿದ್ದರು. ಬೇವೂರು ಸಿದ್ದರಾಮೇಶ್ವರ ಪ್ರೌಢ ಶಾಲೆ ಉಪಪ್ರಾಂಶುಪಾಲ ರಂಗಸ್ವಾಮಿ ನಿರೂಪಿಸಿದರು. ಸಂಸ್ಥೆಯ ಕಾರ್ಯದರ್ಶಿ ಕಾಡಯ್ಯ ಸ್ವಾಗತಿಸಿದರು, ಗುರುಮಾದಯ್ಯ ವಂದಿಸಿದರು.

ಪ್ರಾಂಶುಪಾಲ ಡಿ.ಸಿ.ಸುರೇಶ್, ಡಿ.ಪುಟ್ಟಸ್ವಾಮಿ, ವರಲಕ್ಷ್ಮಿ, ಸುಕನ್ಯ ಕೆಂಪರಾಜು ಗೀತಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ತಾಲ್ಲೂಕಿಗೆ ಅತ್ಯುನ್ನತ ಅಂಕ ಗಳಿಸಿದ ಹೊನ್ನಾಯಕನಹಳ್ಳಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಸಹನಾ, ಆದರ್ಶ ವಿದ್ಯಾಲಯದ ಭೂಮಿಕಾ, ಭಾವನಾ ಗೌಡ, ಬಾಲು ಪಬ್ಲಿಕ್ ಶಾಲೆ ಹಂಸ, ದಿವ್ಯಚೇತನ ಪ್ರೌಢಶಾಲೆ ಹರ್ಷಿತಾ ಹಾಗೂ ಪಿಯುಸಿ ಕಲಾ ವಿಭಾಗದ ಸಿದ್ದರಾಮೇಶ್ವರ ಪದವಿ ಪೂರ್ವ ಕಾಲೇಜಿನ ಸುಮಂತ್ ಗೌಡ, ವಾಣಿಜ್ಯ ವಿಭಾಗದಿಂದ ಹೇಮಾ, ವಿಜ್ಞಾನ ವಿಭಾಗದಿಂದ ಕೇಂಬ್ರಿಜ್ ಪದವಿ ಪೂರ್ವ ಕಾಲೇಜಿನ ಕಾವ್ಯ ಅವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT