ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡದಿ: ಹಾಲು ಉತ್ಪಾದಕರ ಸಂಘಕ್ಕೆ ಆಯ್ಕೆ

Last Updated 18 ಏಪ್ರಿಲ್ 2021, 3:50 IST
ಅಕ್ಷರ ಗಾತ್ರ

ಬಿಡದಿ: ಕೇತಗಾನಹಳ್ಳಿಯ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಜೆಡಿಎಸ್‌ ಬೆಂಬಲಿತ ರಮೇಶ್ ಮತ್ತು ಉಪಾಧ್ಯಕ್ಷರಾಗಿ ಯರಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಂಘದ ಆವರಣದಲ್ಲಿ ಶುಕ್ರವಾರ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಈ ಇಬ್ಬರೇ ನಾಮಪತ್ರ ಸಲ್ಲಿಸಿದ್ದರು. ಹಾಗಾಗಿ, ಚುನಾವಣಾಧಿಕಾರಿ ಕೆ.ಟಿ. ಉಮೇಶ್ ಅವಿರೋಧವಾಗಿ ಆಯ್ಕೆಯನ್ನು ಘೋಷಿಸಿದರು. ಸಹಾಯಕ ಚುನಾವಣಾಧಿಕಾರಿಯಾಗಿ ಸಂಘದ ಸಿಇಒ ನಾರಾಯಣ ಕಾರ್ಯ ನಿರ್ವಹಿಸಿದರು.

ಅಧ್ಯಕ್ಷ ರಮೇಶ್ ಮಾತನಾಡಿ, ಕೇತಗಾನಹಳ್ಳಿ ಹಾಲು ಉತ್ಪಾದಕ ಸಂಘವನ್ನು ಮಾದರಿ ಸಂಘವಾಗಿ ರೂಪಿಸಲು ಶ್ರಮಿಸಲಾಗುವುದು ಎಂದು ತಿಳಿಸಿದರು.

‘ಗುಣಮಟ್ಟದ ಹಾಲು ಪೂರೈಕೆ ಮಾಡುವ ಮೂಲಕ ಸಂಘದ ಅಭಿವೃದ್ಧಿಗೆ ಎಲ್ಲರೂ ಸಹಕಾರ ನೀಡಬೇಕು. ನನ್ನ ಮೇಲೆ ವಿಶ್ವಾಸವಿಟ್ಟು ಸಂಘದ ಅಧ್ಯಕ್ಷನಾಗಲು ಸಹಕರಿಸಿದ ಕಾರ್ಯಕಾರಿ ಸಮಿತಿಯ ನಿರ್ದೇಶಕರು ಮತ್ತು ಸಂಘದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದು ಹೇಳಿದರು

ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಘೋಷಣೆಯಾಗುತ್ತಿದ್ದಂತೆ ಜೆಡಿಎಸ್ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು. ನಿರ್ದೇಶಕರಾದ ಆರ್. ದೇವರಾಜು, ಮುನಿವೆಂಕಟಯ್ಯ, ಶ್ರೀನಿವಾಸ, ಜಯಮ್ಮ, ರಮೇಶ್, ಶ್ಯಾಮು ಕೆ., ಶ್ರೀನಿವಾಸ, ಹರೀಶ್, ರುದ್ರಯ್ಯ, ಸುಮಾ, ಶಶಿಕಲಾ, ಮುಖಂಡರಾದ ನಾರಾಯಣ, ಶೇಖರ್, ನಾಗೇಶ್, ಶ್ರೀನಿವಾಸ್, ವೆಂಕಟರಾಮು, ಮರಿಯಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT