ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುರಿ, ಮೇಕೆ ಕಳವು: ಆತಂಕ

Last Updated 4 ಮಾರ್ಚ್ 2020, 14:26 IST
ಅಕ್ಷರ ಗಾತ್ರ

ಮರಳವಾಡಿ (ಕನಕಪುರ): ಇಲ್ಲಿನ ಮರಳವಾಡಿ ಹೋಬಳಿ ದುನ್ನಸಂದ್ರ ಗ್ರಾಮದಲ್ಲಿ ಮನೆಯ ಹಿಂಬದಿಯ ಕೊಟ್ಟಿಗೆಯಲ್ಲಿದ್ದ ಕುರಿ ಮತ್ತು ಮೇಕೆಗಳನ್ನು ಕಳವು ಮಾಡಲಾಗಿದೆ.

ದುನ್ನಸಂದ್ರ ಗ್ರಾಮದ ಗೌರಮ್ಮ ಕೆಂಪೇಗೌಡ ಎಂಬುವರಿಗೆ ಸೇರಿದ ಸುಮಾರು ₹ 50 ಸಾವಿರ ಬೆಲೆಬಾಳುವ ಕುರಿ ಮೇಕೆಗಳು ಕಳ್ಳತನವಾಗಿವೆ. ರಾತ್ರಿ ಸುಮಾರು 1 ಗಂಟೆ ಸಮಯದಲ್ಲಿ ಕೊಟ್ಟಿಗೆ ಮನೆಯ ಬೀಗ ಒಡೆದು ಟೆಂಪೋದಲ್ಲಿ ಕುರಿ ಮೇಕೆಗಳನ್ನು ಸಾಗಿಸಿದ್ದಾರೆ.

ಬೆಳಿಗ್ಗೆ ಪ್ರಕರಣ ಗೊತ್ತಾಗಿದೆ. ಗೌರಮ್ಮ ಹಾರೋಹಳ್ಳಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.

ದುನ್ನಸಂದ್ರ ಗ್ರಾಮವಲ್ಲದೆ ಗುತ್ತಲಹುಣಸೆದೊಡ್ಡಿ, ಯಲಚವಾಡಿ, ತೋಕಸಂದ್ರ ಮೊದಲಾದ ಗ್ರಾಮಗಳಲ್ಲೂ ಇದೇ ಮಾದರಿಯಲ್ಲಿ ಕಳ್ಳರು ಕುರಿ ಮೇಕೆಗಳನ್ನು ಅಪಹರಿಸಿದ್ದಾರೆ.

‘ಮರಳವಾಡಿ ಮತ್ತು ಹಾರೋಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಕುರಿ ಮೇಕೆ ಕಳ್ಳತನ ವ್ಯವಸ್ಥಿತವಾಗಿ ನಡೆಯುತ್ತಿದೆ’ ಎಂದು ರಾಮನಗರ ಜಿಲ್ಲಾ ಕುರಿ, ಉಣ್ಣೆ ಮತ್ತು ಮೇಕೆ ಸಾಕಾಣಿಕೆದಾರರ ಸಂಘದ ಅಧ್ಯಕ್ಷ ಟಿ.ಸಿ. ಚೂಡಲಿಂಗೇಗೌಡ ಆರೋಪಿಸಿದ್ದಾರೆ.

‘ಗೌರಮ್ಮ ಕೆಂಪೇಗೌಡ ಅವರು ತೀರ ಬಡವರಾಗಿದ್ದು ಕಡಿಮೆ ಜಮೀನು ಹೊಂದಿರುವುದರಿಂದ ಜೀವನಕ್ಕೆ ಆಧಾರವಾಗಿ ಕುರಿ ಮೇಕೆಗಳನ್ನು ಸಾಕಾಣಿಕೆ ಮಾಡುತ್ತಿದ್ದರು. ಆಧಾರವಾಗಿದ್ದು ಅವುಗಳನ್ನೇ ಕಳ್ಳರು ಕದ್ದೊಯ್ದಿರುವುದರಿಂದ ಅವರ ಜೀವನ ಸಂಕಷ್ಟಕ್ಕೆ ಸಿಲುಕಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT