ಭಾನುವಾರ, ಜನವರಿ 19, 2020
29 °C

ದೇವಾಲಯಗಳಲ್ಲಿ ವಿಶೇಷ ಪೂಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕನಕಪುರ: ನೂತನ ವರ್ಷಾಚರಣೆ ಹಿನ್ನೆಲೆಯಲ್ಲಿ ಬುಧವಾರ ಬೆಳಿಗ್ಗೆ ತಾಲ್ಲೂಕಿನ ಪ್ರಮುಖ ದೇವಾಲಯಗಳಿಗೆ ಕುಟುಂಬ ಸಮೇತರಾಗಿ ತೆರಳಿ ವಿಶೇಷ ಪೂಜೆಯನ್ನು ನೆರವೇರಿಸಿದರು.

ತಾಲ್ಲೂಕಿನಾದ್ಯಂತ ಜನತೆ ಮಂಗಳವಾರ ಮಧ್ಯರಾತ್ರಿ ಸಂಭ್ರಮಾಚರಣೆ ಮಾಡಿ 2020 ನ್ನು ಸ್ವಾಗತಿಸಿದರು. ಯಾವುದೇ ಅಹಿತಕರ ಘಟನೆಗಳು ನಡೆಯಲಿಲ್ಲ. 

ಕಲ್ಲಹಳ್ಳಿ ಶ್ರೀನಿವಾಸ, ಶಿವನಹಳ್ಳಿ ವೀರಭದ್ರಸ್ವಾಮಿ, ಬಸವನ ಬನ್ನಿಕುಪ್ಪೆ ಬಸವೇಶ್ವರಸ್ವಾಮಿ, ಮಳಗಾಳು ಈಶ್ವರನ ದೇವಾಲಯ, ಬಸ್‌ ನಿಲ್ದಾಣದ ಆಂಜನೇಯಸ್ವಾಮಿ ಹಾರೋಹಳ್ಳಿ ಅರುಣಾಚಲೇಶ್ವರ, ಬಟ್ಟಲುಗುಂಡಪ್ಪ ದೇವಾಲಯದಲ್ಲಿ ಹೊಸವರ್ಷದ ಹಿನ್ನೆಲೆಯಲ್ಲಿ ಭಕ್ತರು ಸಂಖ್ಯೆ ಹೆಚ್ಚಾಗಿತ್ತು.

ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹೊರಗಡೆ ಬಂದು ವರ್ಷಾಚರಣೆಯನ್ನು ಮಾಡುವವರ ಸಂಖ್ಯೆ ಕಡಿಮೆ ಇತ್ತು. ಬಹುತೇಕ ಜನತೆ ಮನೆಯಲ್ಲೇ ಕುಟುಂಬ ಸಮೇತರಾಗಿ ಸಂಭ್ರಮಾಚರಣೆಯನ್ನು ಮಾಡಿದ್ದಾರೆ. ಹಾಗಾಗಿ ಹೊರಗಡೆ ಯಾರೂ ಹೆಚ್ಚಾಗಿ ಬಂದಿಲ್ಲ ಎಂದು ಪೊಲೀಸರು ತಿಳಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು