ಹಾಂಗ್‌ಝೌ: ಏಷ್ಯನ್ ಗೇಮ್ಸ್‌ನಲ್ಲಿ ಸ್ಫರ್ದಿಸಲಿರುವ ಭಾರತದ ಮೂವರು ಅಥ್ಲೀಟ್‌ಗಳಿಗೆ ಚೀನಾ ವೀಸಾ ನಿರಾಕರಿಸಿದೆ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.
ಅರುಣಾಚಲ ಪ್ರದೇಶದ ಮೂವರು ವುಶು ಅಥ್ಲೀಟ್‌ಗಳಿಗೆ ವೀಸಾ ನಿರಾಕರಣೆ ಮಾಡಿರುವ ಚೀನಾದ ಕ್ರಮವನ್ನು ಬಲವಾಗಿ ಖಂಡಿಸುವುದಾಗಿ ಅವರು ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಕಿರಣ್ ರಿಜಿಜು ಪೋಸ್ಟ್ ಮಾಡಿದ್ದು, ಅರುಣಾಚಲ ಪ್ರದೇಶ ವಿವಾದಿತ ಪ್ರದೇಶವಲ್ಲ. ಭಾರತದ ಅವಿಭಾಜ್ಯ ಅಂಗ ಎಂದು ಹೇಳಿದ್ದಾರೆ.
ಚೀನಾದ ಕ್ರಮವು ಕ್ರೀಡಾಸ್ಪೂರ್ತಿ ಮತ್ತು ಏಷ್ಯನ್ ಗೇಮ್ಸ್ ಶಿಷ್ಟಾಚಾರ ನೀತಿಯ ಉಲ್ಲಂಘನೆಯಾಗಿದೆ. ಇದು ಏಷ್ಯನ್ ಗೇಮ್ಸ್‌ನಲ್ಲಿ ಸ್ಪರ್ಧಿಸುವ ಸದಸ್ಯ ರಾಷ್ಟ್ರಗಳ ವಿರುದ್ಧದ ತಾರತಮ್ಯ ಧೋರಣೆಯಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಚೀನಾದ ನಿಲುವನ್ನು ಅರುಣಾಚಲ ಪ್ರದೇಶದ ಜನರು ವಿರೋಧಿಸುತ್ತಾರೆ ಎಂದು ಅವರು ಹೇಳಿದ್ದಾರೆ.
ಚೀನಾದ ಧೋರಣೆ ವಿರುದ್ಧ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ಕ್ರಮ ಕೈಗೊಳ್ಳಬೇಕು ಎಂದು ವಿನಂತಿಸಿದ್ದಾರೆ.