ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ: ವಿದ್ಯಾರ್ಥಿ ಟಿ.ಎಸ್. ಚಂದನ್‌ಗೆ ಸನ್ಮಾನ

Last Updated 5 ಮೇ 2019, 13:40 IST
ಅಕ್ಷರ ಗಾತ್ರ

ರಾಮನಗರ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲ್ಲೂಕಿಗೆ ಅತಿ ಹೆಚ್ಚು ಅಂಕ ಪಡೆದ ಹೋಲಿ ಕ್ರೆಸೆಂಟ್ ಶಾಲೆ ವಿದ್ಯಾರ್ಥಿ ಟಿ.ಎಸ್.ಚಂದನ್ ಅವರನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಎಚ್.ಗಂಗಮಾರೇಗೌಡ ಅಭಿನಂದಿಸಿದರು.

ಶೇ 97.60ರಷ್ಟು ಫಲಿತಾಂಶ ಪಡೆದಿರುವ ಚಂದನ್ ಇತರ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ. ಹೋಲಿ ಕ್ರೆಸೆಂಟ್ ಆಂಗ್ಲ ಶಾಲೆಯಲ್ಲಿ ಪರೀಕ್ಷೆ ಬರೆದ ಎಲ್ಲಾ 101 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಬಾರಿ ರಾಜ್ಯದಲ್ಲೇ ಜಿಲ್ಲೆಗೆ ಅತ್ಯುತ್ತಮ ಫಲಿತಾಂಶ ನೀಡಿದ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಗಂಗಮಾರೇಗೌಡ ಶ್ಲಾಪಿಸಿದರು.

ಈ ಸಂದರ್ಭದಲ್ಲಿ ಹೋಲಿ ಕ್ರೆಸೆಂಟ್ ಸಂಸ್ಥೆ ಪರವಾಗಿ ಶಾಲೆ ಕಾರ್ಯದರ್ಶಿ ಅಲ್ತಾಫ್ ಅಹಮದ್ ವಿದ್ಯಾರ್ಥಿ ಚಂದನ್ ಗೆ ₹5 ಸಾವಿರ ನಗದು ಬಹುಮಾನ ನೀಡಿ ಪ್ರೋತ್ಸಾಹಿಸಿದರು. ಶಿಕ್ಷಣಾಧಿಕಾರಿ ಪಿ.ಸೋಮಲಿಂಗಯ್ಯ, ಶಾಲೆಯ ಪ್ರಾಚಾರ್ಯೆ ಡಾ. ಸೈಯ್ಯಿದಾ ಶಾಜಿಯಾ, ಮುಖ್ಯಶಿಕ್ಷಕಿ ಲತಾಆನಂದ್, ಸಂಯೋಜಕ ಸ್ಟಾನ್ಲಿಪಾಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT