ಹಾರೋಹಳ್ಳಿ: ತಾಲ್ಲೂಕಿನ ಚಿಕ್ಕಕಲ್ಬಾಳು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಅಗ್ನಿವಂಶ ತಿಗಳ ಕ್ಷತ್ರಿಯರ ಕುಲ ದೇವತೆ ಹಿರಿಶಕ್ತಿ ದೇವಿಯ ಶಿಲಾ ದೇವಾಲಯದ ಉದ್ಘಾಟನೆ ಕಾರ್ಯಕ್ರಮ ಇತ್ತೀಚೆಗೆ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಿಕ್ಕಕಲ್ಬಾಳು ಮಠದ ಮಠಾಧೀಶ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ವಹಿಸಿದ್ದರು.

ನಂತರ ಆಶೀರ್ವಚನ ನೀಡಿದ ಅವರು, ‘ಸಮುದಾಯವು ನಂಬಿಕೆ ಮತ್ತು ವಿಶ್ವಾಸಕ್ಕೆ ಹೆಸರಾಗಿದೆ. ಅದನ್ನು ಮುಂದೆಯೂ ಉಳಿಸಿಕೊಂಡು ಎಲ್ಲಾ ರೀತಿಯಲ್ಲೂ ಸ್ವಾವಲಂಬಿಗಳಾಗಿ ಅಭಿವೃದ್ಧಿ ಹೊಂದಬೇಕು. ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಉಳ್ಳವರ ಸಮುದಾಯದ ಕುರಿತು ಕಳಕಳಿ ಬೆಳೆಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ದೇವಸ್ಥಾನ ಉದ್ಘಾಟಿಸಿ ಮಾತನಾಡಿದ ಕೆಪಿಸಿಸಿ ಹಿಂದುಳಿದ ವರ್ಗಗಗಳ ರಾಜ್ಯ ಉಪಾಧ್ಯಕ್ಷ ಶ್ರೀಕಾಂತ್, ‘ಸಮುದಾಯವು ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಮುಂದೆ ಬರಬೇಕಿದೆ. ಮಕ್ಕಳ ಶಿಕ್ಷಣಕ್ಕೆ ನಮ್ಮವರು ಹೆಚ್ಚಿನ ಒತ್ತು ನೀಡಬೇಕು. ಶಿಕ್ಷಣದಿಂದ ಮಾತ್ರ ನಾವು ಎಲ್ಲವನ್ನೂ ಗಳಿಸಲು ಸಾಧ್ಯ. ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗೆ ನನ್ನ ಕೈಲಾದ ನೆರವು ನೀಡಲು ಸದಾ ಸಿದ್ದ’ ಎಂದು ಹೇಳಿದರು.

ಬೆಂಗಳೂರಿನ ಬೇಲಿ ಮಠದ ಶಿವಾನುಭವ ಚರಮೂರ್ತಿ ಶಿವರುದ್ರ ಸ್ವಾಮೀಜಿ, ಕನಕಪುರದ ದೇಗುಲ ಮಠದ ಮುಮ್ಮಡಿ ನಿರ್ವಾಣ ಸ್ವಾಮೀಜಿ, ಮರಳೇಗವಿ ಮಠದ ಮುಮ್ಮಡಿ ಶಿವರುದ್ರ ಸ್ವಾಮೀಜಿ ಹಾಗೂ ಶಿವಗಿರಿ ಕ್ಷೇತ್ರದ ಅನ್ನದಾನೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಶಾಸಕ ಎಚ್.ಎ. ಇಕ್ಬಾಲ್ ಹುಸೇನ್, ವಿಧಾನ ಪರಿಷತ್ ಮಾಜಿ ಸದಸ್ಯ ಪಿ.ಆರ್. ರಮೇಶ್, ಬಿಜೆಪಿ ಮುಖಂಡ ಗೌತಮ್ ಗೌಡ ಗ್ರಾಮಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು. ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಜಿ.ಎಸ್. ಸುರೇಶ್, ತಾ.ಪಂ. ಮಾಜಿ ಸದಸ್ಯ ರಾಮು, ಧರ್ಮದರ್ಶಿಗಳಾದ ರವಿ ಶೆಟ್ರು, ಅಣೆದೊಡ್ಡಿ ಶಿವನಂಜಯ್ಯ, ಮುಖಂಡರಾದ ಚಂದ್ರಯ್ಯ, ಕರಿಯಣ್ಣ, ಮುದ್ದೇಗೌಡ, ತಮ್ಮಯಣ್ಣ, ಪುಟ್ಟವೆಂಕಟಯ್ಯ, ಸಿ.ಎಂ. ಶಿವನಂಜೇಗೌಡ, ಪೋಲಿಸರಾದ ಸಹದೇವಕುಮಾರ್, ನಂಜುಂಡಯ್ಯ, ಪೀಣ್ಯ ಸಿ.ಡಿ. ಸಿದ್ದಯ್ಯ, ಬಸವರಾಜು ಸಿ.ಜಿ, ಸಿದ್ದರಾಜು ಸಿ.ಎಸ್, ಕೃಷ್ಣಮೂರ್ತಿ ಸಿ.ಜಿ, ಮುತ್ತಣ್ಣ ಹಾಗೂ ಇತರರು ಇದ್ದರು.

ಸಹೋದರಿಯರಾದ ಚಂದನ ಹಾಗೂ ಪ್ರಾರ್ಥನೆ ಹಾಡಿದರು. ರಾಜಾಜಿನಗರ ಬಿ.ಇಡಿ ಕಾಲೇಜಿನ ಅಧೀಕ್ಷಕ ಸಿ.ಜಿ. ಮಹದೇವ್ ಗಣ್ಯರನ್ನು ಸ್ವಾಗತಿಸಿದರು. ಚಿಕ್ಕಕಲ್ಬಾಳು ಹಿರಿಯ ಪಾಠಶಾಲೆಯ ಸಹ ಶಿಕ್ಷಕ ಸಿ.ವೈ. ಚಂದ್ರಮೂರ್ತಿ ನಿರೂಪಣೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.