ರಾಮನಗರ: ತಾಲ್ಲೂಕಿನ ಸುಗ್ಗನಹಳ್ಳಿ ಗ್ರಾಮ ಪಂಚಾಯಿತಿಯನ್ನು ರಾಜ್ಯ ಆರೋಗ್ಯ ಇಲಾಖೆಯು ‘ತಂಬಾಕು ಮುಕ್ತ ಗ್ರಾಮ ಪಂಚಾಯಿತಿ’ಯಾಗಿ ಘೋಷಿಸಿದೆ. ಈ ಪರಿಶೀಲನೆಗಾಗಿ ಶನಿವಾರ ಕೇಂದ್ರ ಮತ್ತು ರಾಜ್ಯ ಆರೋಗ್ಯ ಇಲಾಖೆ ಅಧಿಕಾರಿಗಳ ತಂಡವೊಂದು ಗ್ರಾಮವನ್ನು ಸಂದರ್ಶಿಸಿ ಸ್ಥಳೀಯರು ಮತ್ತು ವ್ಯಾಪಾರಸ್ಥರೊಂದಿಗೆ ಮಾಹಿತಿ ಸಂಗ್ರಹಿಸಿತು.

ಅಧಿಕಾರಿಗಳ ತಂಡ ಗ್ರಾಮದಲ್ಲಿ ಸ್ಥಳ ವೀಕ್ಷಣೆ ನಡೆಸಿ, ವಿಡಿಯೊ ಚಿತ್ರೀಕರಣ ಮಾಡಿತು. ನಂತರ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅರ್ಪಿತಾ ಹರೀಶ್ ಕುಮಾರ್ ಮಾತನಾಡಿ, ‘ಗ್ರಾಮಸ್ಥರು, ಪಂಚಾಯಿತಿ ಸದಸ್ಯರು ಮತ್ತು ಸಿಬ್ಬಂದಿ ಸಹಕಾರದಿಂದಾಗಿ ರಾಜ್ಯದಲ್ಲೇ ಮೊದಲ ತಂಬಾಕು ಮುಕ್ತ ಗ್ರಾಮ ಪಂಚಾಯಿತಿ ಎಂಬ ಹೆಗ್ಗಳಿಕೆ ಸಿಕ್ಕಿದೆ. ತಂಬಾಕಿನ ದುಷ್ಪರಿಣಾಮ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗಿದ್ದು, ಮಾರಾಟಗಾರರ ಮೇಲೆ ದಂಡವೂ ವಿಧಿಸಲಾಗಿದೆ’ ಎಂದರು.

ಸುಗ್ಗನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶ್ರೂಷಕಿ ಶಾಲಿನಿ, ‘ತಂಬಾಕಿನ ಹಾನಿಕಾರಕ ಪರಿಣಾಮ ಬಗ್ಗೆ ನಿರಂತರವಾಗಿ ಎರಡು ವರ್ಷಗಳ ಕಾಲ ಜಾಗೃತಿ ಕಾರ್ಯಕ್ರಮ ನಡೆಸಲಾಗಿದೆ. ರೋಗಿಗಳ ಮೂಲಕ ಕುಟುಂಬಗಳನ್ನು ಗುರುತಿಸಿ ಅವರಲ್ಲಿ ಅರಿವು ಮೂಡಿಸಲಾಗಿದೆ’ ಎಂದು ತಿಳಿಸಿದರು.

ಪಂಚಾಯಿತಿ ಸದಸ್ಯರು, ನೀರುಗಂಟಿ, ತ್ಯಾಜ್ಯ ಗಾಡಿ ಚಾಲಕರು ಸೇರಿದಂತೆ ಅನೇಕರನ್ನು ರೋಟರಿ ಸಿಲ್ಕ್ ಸಿಟಿ ಶಾಖೆಯಿಂದ ಸತ್ಕರಿಸಲಾಯಿತು.

ಮನೋವೈದ್ಯ ಚಂದ್ರಶೇಖರ್, ರೋಟರಿ ಸಿಲ್ಕ್ ಸಿಟಿ ಅಧ್ಯಕ್ಷ ಪ್ರಕಾಶ್, ಕಾರ್ಯದರ್ಶಿ ಪರಮೇಶ್, ಗ್ರಾ.ಪಂ. ಉಪಾಧ್ಯಕ್ಷ ಗೋವಿಂದರಾಜು, ಸದಸ್ಯರಾದ ಚಿಕ್ಕಸ್ವಾಮಿ, ಪ್ರೇಮ ಗೋವಿಂದಯ್ಯ, ಕೃಷ್ಣಪ್ಪ, ಗುರುಲಿಂಗಯ್ಯ, ಮಲ್ಲೇಶ್, ಪಿಡಿಒ ಸುರೇಶ್, ಬಿಲ್ ಕಲೆಕ್ಟರ್ ಬಸವರಾಜ್, ಆರೋಗ್ಯ ಅಧಿಕಾರಿಗಳಾದ ಜಿಲಾನ್ ಪಾಷಾ, ಶಾಲಿನಿ, ಮಂಗಳಾ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.