ಬುಧವಾರ, ಆಗಸ್ಟ್ 4, 2021
27 °C

ರಾಮನಗರ: ಹಾಸಿಗೆ, ವೆಂಟಿಲೇಟರ್‌ ಒದಗಿಸಲು ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ರಾಜ್ಯದಲ್ಲಿ ಕೋವಿಡ್‌ ರೋಗಿಗಳಿಗೆ ಅಗತ್ಯವಾದ ಹಾಸಿಗೆಗಳನ್ನು ಸರ್ಕಾರ ಒದಗಿಸಬೇಕು. ಬೆಂಗಳೂರು ಒಂದಕ್ಕೆ 1 ಲಕ್ಷ ಬೆಡ್‌ಗಳನ್ನು ನೀಡಬೇಕು ಎಂದು ಕನ್ನಡಪರ ಹೋರಾಟಗಾರ ವಾಟಾಳ್‌ ನಾಗರಾಜು ಆಗ್ರಹಿಸಿದರು.

ನಗರದ ಐಜೂರು ವೃತ್ತದಲ್ಲಿ ಸೋಮವಾರ ಹಾಸಿಗೆ ಮೇಲೆ ಮಲಗಿ ಚಳವಳಿ ನಡೆಸಿ ಅವರು ಮಾತನಾಡಿದರು. ಇಂದು ರಾಜ್ಯದಲ್ಲಿ ವೆಂಟಿಲೇಟರ್‌ಗಳ ಕೊರತೆ ಇದ್ದು, ಅದರ ಪೂರೈಕೆಗೆ ಆದ್ಯತೆ ನೀಡಬೇಕಾದದು ಸರ್ಕಾರದ ಕರ್ತವ್ಯ. ಅಂತೆಯೇ ಪ್ರತಿ ಜಿಲ್ಲೆಗೆ 10 ಸಾವಿರ ಹಾಸಿಗೆಗಳನ್ನು ಒದಗಿಸಬೇಕು ಎಂದರು.

ಕೋವಿಡ್ ವಿಷಯದಲ್ಲಿ ರಾಜಕೀಯ ಬೇಡ. ಈ ಬಗ್ಗೆ ಮುಖ್ಯಮಂತ್ರಿಗಳು ತಮ್ಮ ದಕ್ಷತೆ ಪ್ರದರ್ಶಿಸಬೇಕು. ಅಸಮರ್ಥ ಸಚಿವರನ್ನು ಸಂಪುಟದಿಂದ ಕೈಬಿಡಬೇಕು. ಅಧಿಕಾರಿಗಳಿಗೂ ಅಗತ್ಯ ಮಾರ್ಗದರ್ಶನ ನೀಡಬೇಕು. ಬೀದಿ ಬೀದಿಗಳಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪಡಿಸಬೇಕು. ಹೆಲಿಕಾಪ್ಟರ್‌ ಮೂಲಕವೂ ದ್ರಾವಣ ಸಿಂಪಡಿಸಬೇಕು ಎಂದು ಆಗ್ರಹಿಸಿದರು. ವಿವಿಧ ಸಂಘಟನೆಗಳ ಮುಖಂಡರಾದ ಜಗದೀಶ, ಸಿ.ಎಸ್. ಜಯಕುಮಾರ್‌, ಪಾರ್ಥಸಾರಥಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು