ಸೋಮವಾರ, ಮೇ 17, 2021
23 °C

‘ರೌಡಿಗಳು ನಡವಳಿಕೆ ಸುಧಾರಿಸಿಕೊಳ್ಳಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ‘ರೌಡಿಗಳು ಆತ್ಮಾವಲೋಕನ ಮಾಡಿಕೊಂಡು ನಡವಳಿಕೆಯನ್ನು ಸುಧಾರಿಸಿಕೊಂಡರೆ ಒಳ್ಳೆಯದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ. ಶಾಂತರಾಜ್ ಎಚ್ಚರಿಕೆ ನೀಡಿದರು.

ಡಿಎಆರ್ ಆವರಣದಲ್ಲಿ ಭಾನುವಾರ ನಡೆದ ರೌಡಿ ಪೆರೇಡ್‌ನಲ್ಲಿ ಅವರು ಮಾತನಾಡಿದರು.

‘ಯಾರೂ ಬಯಸಿ ಅಪರಾಧಿಗಳಾಗುವುದಿಲ್ಲ. ಪರಿಸ್ಥಿತಿಯ ಕೈಗೊಂಬೆಗಳಾಗಿ ಅಪರಾಧಿ ಆಗುತ್ತಾರೆ. ವಯಸ್ಸಾದ ರೌಡಿಗಳು ಯಾವುದೇ ಮರಿ ರೌಡಿಗಳನ್ನು ಬೆಳಸಬೇಡಿ. ನೀವು ಏನೇ ಮಾಡಿದರೂ ನಮಗೆ ಮಾಹಿತಿ ಇರುತ್ತದೆ’ ಎಂದರು.

‘ಯಾವುದೇ ಸ್ಥಳದಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ಉಂಟಾದಾಗ, ಯಾರು ಅದಕ್ಕೆ ಕಾರಣ ಎಂಬ ಮಾಹಿತಿ ನೀಡಬಹುದು. ಹಾಗೆಂದು ಸುಳ್ಳು ಮಾಹಿತಿ ನೀಡಿದರೆ ನಮಗೆ ತಿಳಿಯುತ್ತದೆ. ನಾವು ಮಾಹಿತಿ ನೀಡಿದ್ದೇವೆ ಅಪರಾದ ಮಾಡಬಹುದು ಎಂದು ಭಾವಿಸಿದರೆ ಅದು ತಪ್ಪು. ಒಳ್ಳೆಯ ಮಾಹಿತಿ ನೀಡಿದವರನ್ನು ಗಮನದಲ್ಲಿಟ್ಟುಕೊಂಡಿರುತ್ತೇವೆ. ನಿಮ್ಮ ಒಳ್ಳೆಯ ಕೆಲಸಕ್ಕೆ ಮಾತ್ರ ನಮ್ಮ ಬೆಂಬಲ ಇರುತ್ತದೆ’ ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಟಿ.ಶೇಖರ್ ಮಾತನಾಡಿ, ‘ರೌಡಿ ಶೀಟರ್‌ಗಳು ನ್ಯಾಯಾಲಯಕ್ಕೆ ಸರಿಯಾದ ವೇಳೆಯಲ್ಲಿ ಹಾಜರಾಗಿ ನ್ಯಾಯಾಲಯದ ಪ್ರಕ್ರಿಯೆಯಲ್ಲಿ ಭಾಗವಹಿಸಿ, ಸನ್ನಡತೆ, ಕಡಿಮೆ ಅಪರಾಧದ ಆಧಾರದ ಮೇಲೆ ನಿರಪರಾಧಿ ಆಗಲು ಸಾಧ್ಯತೆ ಇದೆ’ ಎಂದು ತಿಳಿಸಿದರು.

ಪೆರೇಡ್ ಅಲ್ಲಿ 238 ರೌಡಿಗಳು ಭಾಗವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು