ಶಿವಮೊಗ್ಗ: ಚನ್ನಗಿರಿ ತಾಲ್ಲೂಕು ಮರವಂಜಿ ತಾಂಡಾದ ಕೂಲಿ ಕಾರ್ಮಿಕ ದಂಪತಿಯ ಪುತ್ರ ಕುವೆಂಪು ವಿಶ್ವವಿದ್ಯಾಲಯದ ಸ್ನಾತಕೋತ್ತರ ಕನ್ನಡ ವಿಭಾಗದಲ್ಲಿ 10 ಸ್ವರ್ಣ ಪದಕ ಮುಡಿಗೇರಿಸಿಕೊಂಡರು.

ಶಂಕರಘಟ್ಟದ ಜ್ಞಾನ ಸಹ್ಯಾದ್ರಿಯಲ್ಲಿ ಬುಧವಾರ ನಡೆದ 30ನೇ ಘಟಿಕೋತ್ಸವದಲ್ಲಿ ಗಣ್ಯರು ಪದಕ ಹಾಗೂ ಮೂರು ನಗದು ಬಹುಮಾನ ಪ್ರದಾನ ಮಾಡಿದರು.

ಹೂನ್ಯಾನಾಯ್ಕ– ಗಂಗೀಬಾಯಿ ದಂಪತಿಯ ಮೂವರು ಮಕ್ಕಳಲ್ಲಿ ರಂಗನಾಥ್ ಕೊನೆಯ ಮಗ. ಒಂದು ಎಕರೆ ಸ್ವಂತ ಜಮೀನು ಇದ್ದು,ಈ ದಂಪತಿ ನಿತ್ಯವೂ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ. ತಾವು ಬಡತನದ ಬೇಗೆಯಲ್ಲಿ ಬೆಂದರೂ ಮಕ್ಕಳಿಗೆ ಉನ್ನತಶಿಕ್ಷಣ ಕೊಡಿಸಿದ್ದಾರೆ.ಪ್ರಸ್ತುತ ಕುವೆಂಪು ವಿಶ್ವವಿದ್ಯಾಲಯದಲ್ಲೇಪಿಎಚ್.ಡಿ ಪ್ರವೇಶಕ್ಕೆ ಆಯ್ಕೆಯಾಗಿರುವ ಅವರು ಉತ್ತಮ ಪ್ರಾಧ್ಯಾಪಕನಾಗುವ ಇಚ್ಛೆಇಟ್ಟುಕೊಂಡಿದ್ದಾರೆ.

ಶಿವಮೊಗ್ಗದ ವರ್ತಕ ಮಹಮದ್ ಫೈರೋಜ್ ಪುತ್ರಿ ರುಖಯ್ಯಾ ಬಿ.ಕಾಂನಲ್ಲಿ, ಮೂಡಿಗೆರೆಯ ಕಾಫಿ ಬೆಳೆಗಾರಎಂ.ಬಿ. ರಮೇಶ್ ಅವರ ಪುತ್ರಿ ಎಂಎಸ್ಸಿ ಜೈವಿಕ ತಂತ್ರಜ್ಞಾನದಲ್ಲಿ ತಲಾಐದು ಚಿನ್ನದ ಪದಕಪಡೆದಿದ್ದಾರೆ.

ಘಟಿಕೋತ್ಸವದಲ್ಲಿ 23,732 ವಿದ್ಯಾರ್ಥಿಗಳು ಪದವಿಗೆ ಅರ್ಹರಾದರು. 194 ಅಭ್ಯರ್ಥಿಗಳಿಗೆ ಪಿಎಚ್.ಡಿ ಪ್ರಧಾನ ಮಾಡಲಾಯಿತು.67 ವಿದ್ಯಾರ್ಥಿಗಳು119 ಸ್ವರ್ಣ ಪದಕ ಹಂಚಿಕೊಂಡರು. ರಾಜ್ಯಪಾಲರು, ಉನ್ನತ ಶಿಕ್ಷಣ ಸಚಿವರು ಗೈರುಹಾಜರಾಗಿದ್ದರು. ಒಡಿಶಾ ಕೇಂದ್ರೀಯ ವಿಶ್ವವಿದ್ಯಾಲಯದ ಕಲಪತಿ ಪಿ.ವಿ. ಕೃಷ್ಣ ಭಟ್ಅವರಘಟಿಕೋತ್ಸವ ಮುದ್ರಿತ ಭಾಷಣವನ್ನು ವೇದಿಯಲ್ಲಿ ಪ್ರಸಾರ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.