ಮಂಗಳವಾರ, ಸೆಪ್ಟೆಂಬರ್ 21, 2021
21 °C

ಶಿವಮೊಗ್ಗ: ವಾರಂಟ್‌ಗೆ ಹೆದರಿ ಗಾಜು ನುಂಗಿದ ಆರೋಪಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ವಿನೋಬನಗರದಲ್ಲಿ ಬುಧವಾರ ಆರೋಪಿಯೊಬ್ಬ ವಾರಂಟ್‌ಗೆ ಹೆದರಿ ಗಾಜಿನ ಚೂರುಗಳನ್ನು ನುಂಗಿ ಅಸ್ವಸ್ಥನಾಗಿದ್ದಾನೆ.

ದರೋಡೆ ಸೇರಿದಂತೆ ನಾಲ್ಕು ಪ್ರಕರಣಗಳಲ್ಲಿ ಆರೋಪಿಯಾಗಿರುವ ರೂಪೇಶ್‌ (22) ನ್ಯಾಯಲಯದ ವಿಚಾರಣೆಗೆ ಸತತ ಗೈರುಹಾಜರಾಗಿದ್ದ. ನ್ಯಾಯಾಲಯ ಆತನ ವಿರುದ್ಧ ವಾರಂಟ್‌ ಹೊರಡಿಸಿತ್ತು. ಆರೋಪಿ ಶುಭಮಂಗಳ ಸಭಾ ಭವನದ ಬಳಿ ಇರುವ ಮಾಹಿತಿ ಪಡೆದ ಮುಖ್ಯ ಕಾನ್‌ಸ್ಟೆಬಲ್‌ ಮಂಜುನಾಥ್‌ ಅವರು ವಾರಂಟ್‌ ಜಾರಿ ಮಾಡಲು ಮುಂದಾಗಿದ್ದಾರೆ. ಅವರನ್ನು ಚರಂಡಿಗೆ ತಳ್ಳಿದ ಆರೋಪಿ ಬೈಕ್‌ನ ಕನ್ನಡಿ ಒಡೆದು ಚೂರುಗಳನ್ನು ನುಂಗಿದ್ದಾನೆ.

ಚರಂಡಿಯಲ್ಲಿ ಬಿದ್ದ ಕಾನ್‌ಸ್ಟೆಬಲ್‌ ತಲೆಗೆ ಪೆಟ್ಟಾಗಿದೆ. ರೂಪೇಶ್ ಅಸ್ತವ್ಯಸ್ಥಗೊಂಡಿದ್ದಾನೆ. ಸ್ಥಳೀಯರು ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆರೋಪಿ ವಿರುದ್ಧ ವಿನೋಬನಗರ ಪೊಲೀಸರು ಮತ್ತೊಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು