‘ಕೃಷಿ ಯಾನ’ ತಾಣದ ರಾಗಿ ತಾಕಿನಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಪಾಠ
ನಗರ ಪ್ರದೇಶದ ಹೊಸ ಪೀಳಿಗೆಗೆ ಕೃಷಿ ಗ್ರಾಮೀಣ ಸೊಗಡನ್ನು ಪರಿಚಯಿಸಲು ರಾಜ್ಯದಲ್ಲಿ ಮೊದಲ ಬಾರಿಗೆ ಕೆವಿಕೆಯಿಂದ ಸುಸಜ್ಜಿತ ಪ್ರವಾಸಿ ಕೇಂದ್ರ ಆರಂಭಿಸಿದ್ದೇವೆ. ವಿದ್ಯಾರ್ಥಿಗಳು ಸೇರಿದಂತೆ ಆಸಕ್ತರು ಬಳಕೆ ಮಾಡಿಕೊಳ್ಳಬಹುದು
ಪ್ರೊ.ಆರ್.ಸಿ.ಜಗದೀಶ್ ಕುಲಪತಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿ.ವಿ
ದಿನದ ಪ್ರವಾಸ: ₹ 250 ಶುಲ್ಕ
ಕೃಷಿಯ ಬಗ್ಗೆ ಆಸಕ್ತಿ ಇರುವವರು ಇಲ್ಲಿಗೆ ಒಂದು ದಿನದ ಪ್ರವಾಸ ಹಮ್ಮಿಕೊಳ್ಳಬಹುದು. ಹೀಗೆ ಬಂದವರಿಗೆ ಸಿಹಿ ಪಾನಕದ ಸ್ವಾಗತ (ವೆಲ್‌ಕಮ್ ಡ್ರಿಂಕ್) ದೊರೆಯಲಿದೆ. ಬೆಳಿಗ್ಗೆ ಒಂದಷ್ಟು ಲಘು ತಿಂಡಿ (ಸ್ನ್ಯಾಕ್ಸ್) ಮಧ್ಯಾಹ್ನ ಪುಷ್ಕಳ ಭೋಜನ ಸಂಜೆ ಮತ್ತೆ ಲಘು ತಿಂಡಿ ಮತ್ತು ಚಹಾದ ಆತಿಥ್ಯವೂ ದೊರೆಯಲಿದೆ. ‘ಕೃಷಿ ಯಾನ’ ಕೇಂದ್ರಕ್ಕೆ ಪ್ರವೇಶ ದರ ಒಬ್ಬರಿಗೆ ₹250 ನಿಗದಿಪಡಿಸಲಾಗದೆ. ‘ನಾಲ್ಕು ಮಂದಿಯ ಸಣ್ಣ ಕುಟುಂಬದಿಂದ ಮೊದಲ್ಗೊಂಡು ಶಾಲೆ–ಕಾಲೇಜು ವಿದ್ಯಾರ್ಥಿಗಳು ಕಚೇರಿಯ ಸಹೊದ್ಯೋಗಿಗಳು ಮೊದಲೇ ಬುಕ್ಕಿಂಗ್ ಮಾಡಿ ಕೃಷಿ ಯಾನದ ಮಜಾ ಅನುಭವಿಸಬಹುದು’ ಎಂದು ಕೃಷಿ ವಿಸ್ತರಣೆ ವಿಭಾಗದ ವಿಜ್ಞಾನಿ ಮಂಜುನಾಥ ಬಿ.ಕುದರಿ ಹೇಳುತ್ತಾರೆ. ನೋಂದಣಿಗೆ ಸಂಪರ್ಕ ಸಂಖ್ಯೆ: 9480751606.