ಶಿವಮೊಗ್ಗ: ಈ ವರ್ಷ ಸರಕು ಅಡಿಕೆ ಬೆಲೆಯು ದಾಖಲೆ ಮಟ್ಟಕ್ಕೆ ಏರಿಕೆಯಾಗಿದೆ. ಇಲ್ಲಿನ ಎಪಿಎಂಸಿಯಲ್ಲಿ ಗುರುವಾರ ಸರಕು (ಹಸ) ಅಡಿಕೆ ದರ ಕ್ವಿಂಟಲ್ಗೆ ₹ 99,999, ಬೆಟ್ಟೆ ಕ್ವಿಂಟಲ್ಗೆ ₹ 77,770 ಹಾಗೂ ರಾಶಿ ಅಡಿಕೆ ಕ್ವಿಂಟಲ್ಗೆ ₹ 66,899ಕ್ಕೆ ಮಾರಾಟವಾಗಿದೆ. ಮೇ 13ರಂದು ಸರಕು ಅಡಿಕೆ ಕ್ವಿಂಟಲ್ಗೆ ₹ 98,896 ದಾಖಲೆಯ ಮೊತ್ತಕ್ಕೆ ಮಾರಾಟವಾಗಿತ್ತು.

ಹಸಿ ಅಡಿಕೆಗೂ ಭರ್ಜರಿ ಬೆಲೆ:

ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಳದ ಕಾರಣ ಕೇಣಿದಾರರು ಬೆಳೆಗಾರರ ಮನೆ ಬಾಗಿಲಿಗೆ ಬಂದು ಹಸಿ ಅಡಿಕೆ ಖರೀದಿ ಮಾಡುತ್ತಿದ್ದಾರೆ. ಹಸಿ ಅಡಿಕೆ ಭದ್ರಾವತಿ ತಾಲ್ಲೂಕಿನ ಹೊಳೆಹೊನ್ನೂರಿನಲ್ಲಿ ಕ್ವಿಂಟಲ್ಗೆ ₹ 7,500, ಚಿತ್ರದುರ್ಗ ಜಿಲ್ಲೆಯ ಭೀಮಸಮುದ್ರ ಮಾರುಕಟ್ಟೆಯಲ್ಲಿ ಕ್ವಿಂಟಲ್ಗೆ ₹ 8,500 ಹಾಗೂ ದಾವಣಗೆರೆಯಲ್ಲಿ ಕ್ವಿಂಟಲ್ಗೆ ₹ 8,300ಕ್ಕೆ ಮಾರಾಟವಾಗಿದೆ.

‘ದೀಪಾವಳಿ ಸಂದರ್ಭದಲ್ಲಿ ಗುಟ್ಕಾ, ಪಾನ್ ಮಸಾಲ ಕಂಪೆನಿಯವರು ಉತ್ಪಾದನೆ ಹೆಚ್ಚಿಸುತ್ತಾರೆ. ಇದರಿಂದ ಅಡಿಕೆಗೆ ಬೇಡಿಕೆ ಹೆಚ್ಚಾಗಿದೆ. ಈಗ ಬೆಳೆಗಾರರ ಬಳಿ ಹಳೆಯ ಅಡಿಕೆ ದಾಸ್ತಾನು ಇಲ್ಲ. ವಿಪರೀತ ಮಳೆಯಿಂದ ಬಯಲು ಸೀಮೆಯಲ್ಲಿ ಶೇ 30ರಷ್ಟು ಹಾಗೂ ಮಲೆನಾಡಿನಲ್ಲಿ ಶೇ 50ರಷ್ಟು ಇಳುವರಿ ಕಡಿಮೆಯಾಗಿದೆ. ಬೇಡಿಕೆಯಷ್ಟು ಅಡಿಕೆ ಸಿಗದ ಕಾರಣ ಬೆಲೆ ಸಹಜವಾಗಿ ಹೆಚ್ಚಳವಾಗಿದೆ’ ಎಂದು ಶಿವಮೊಗ್ಗದ ಮಲೆನಾಡು ಅಡಿಕೆ ಮಾರಾಟ ಸಹಕಾರ ಸಂಘದ (ಮ್ಯಾಮ್ಕೋಸ್) ವ್ಯವಸ್ಥಾಪಕ ನಿರ್ದೇಶಕ ಶ್ರೀಕಾಂತ್ ಬರುವಾ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.