ಬುಧವಾರ, ಮಾರ್ಚ್ 3, 2021
30 °C
ಕಾಡಾ 100ನೇ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷೆ ಪವಿತ್ರ ರಾಮಯ್ಯ ಭರವಸೆ

ಭದ್ರಾ ಅಚ್ಚುಕಟ್ಟು ಪ್ರದೇಶದ ಅಭಿವೃದ್ಧಿಗೆ ಯತ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಆಡಳಿತ ಮತ್ತು ನಿರ್ದೇಶನದಡಿ 2020ರ ಅಂತ್ಯಕ್ಕೆ ಸರ್ಕಾರದಿಂದ ₹ 4.86 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಪೂರ್ಣ ಪ್ರಮಾಣದಲ್ಲಿ ಪ್ರಗತಿ ಸಾಧಿಸಿದೆ ಎಂದು ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಪವಿತ್ರ ರಾಮಯ್ಯ
ತಿಳಿಸಿದರು.

ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪ್ರಾಧಿಕಾರದ 100ನೇ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಆಸ್ತಿಗಳ ಸೃಜನೆ ಕಾಮಗಾರಿಯಡಿ 2020ರ ಅಂತ್ಯಕ್ಕೆ ಸರ್ಕಾರದಿಂದ ₹ 63.58 ಲಕ್ಷ ಬಿಡುಗಡೆಯಾಗಿದೆ. ನಬಾರ್ಡ್‌ನಿಂದ ₹ 96.18 ಲಕ್ಷ ಬಿಡುಗಡೆಯಾಗಿದ್ದು, ₹ 59.26 ಲಕ್ಷ ಪ್ರಗತಿ ಸಾಧಿಸಲಾಗಿದೆ. ಎಸ್.ಡಿ.ಪಿ ಅಡಿ ಡಿಸೆಂಬರ್ 2020ರ ಅಂತ್ಯಕ್ಕೆ
₹ 2.57 ಕೋಟಿ ಬಿಡುಗಡೆಯಾಗಿದ್ದು, ₹ 2.28 ಕೋಟಿ ಪ್ರಗತಿ ಸಾಧಿಸಿದೆ. ಶಿವಮೊಗ್ಗ, ರಾಣೆಬೆನ್ನೂರು ವಿಭಾಗದಲ್ಲಿ ಬಸಿಗಾಲುವೆ, ಹೊಲಗಾಲುವೆ, ಭೂ ಸುಧಾರಣಾ, ಆಯಕಟ್ಟು ರಸ್ತೆ ಇನ್ನುಳಿದ ಕಾಮಗಾರಿಗಳಿಗೆ ₹ 24.6 ಕೋಟಿ ಬಿಡುಗಡೆಯಾಗಿದ್ದು, ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದರು.

ವೇತನ, ಕಾಮಗಾರಿ, ಪಿಎಂಕೆಎಸ್‌ವೈ, ನಬಾರ್ಡ್, ಎಸ್.ಡಿ.ಪಿ, ಎಸ್.ಡಿ.ಪಿ- ಎಸ್.ಸಿ.ಪಿ, ಎಸ್.ಡಿ.ಪಿ-ಟಿ.ಎಸ್.ಪಿ ಯೋಜನೆಗಳಿಗೆ ಹಣ ಬಿಡುಗಡೆಗೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಖಾಲಿ ಹುದ್ದೆ ಭರ್ತಿಗೆ ಕ್ರಮ: ಪ್ರಾಧಿಕಾರದಲ್ಲಿ 181 ಹುದ್ದೆಗಳಿದ್ದು, ಕೇವಲ 59 ಹುದ್ದೆ ಭರ್ತಿ ಮಾಡಲಾಗಿದೆ. ಇನ್ನುಳಿದ 122 ಹುದ್ದೆಯನ್ನು ಹಂತ ಹಂತವಾಗಿ ಭರ್ತಿ ಮಾಡಿಕೊಳ್ಳುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ನೂತನ ನಿರ್ದೇಶಕರ ಸಹಕಾರದೊಂದಿಗೆ ಮುಖ್ಯಮಂತ್ರಿಗಳ ಮನವೊಲಿಸಿ ಹೆಚ್ಚಿನ ಅನುದಾನ ತರುವ ಮೂಲಕ ಅಚ್ಚುಕಟ್ಟು ಭಾಗವನ್ನು ಅಭಿವೃದ್ಧಿಪಡಿಸಲಾಗುವುದು ಎಂದರು.

ಜಿಲ್ಲಾ ಪ್ರವಾಸ: ಮುಂದಿನ ದಿನಗಳಲ್ಲಿ ಕಾಡಾ ವ್ಯಾಪ್ತಿಯ ಎಲ್ಲ 12 ಜಿಲ್ಲೆಗಳಿಗೆ ಪ್ರವಾಸ ಕೈಗೊಳ್ಳಲು ತೀರ್ಮಾನಿಸಲಾಗಿದೆ. ಅಭಿವೃದ್ಧಿ ಕಾರ್ಯಗಳು ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಅವಧಿ ಪೂರ್ವಗೊಳ್ಳುವರೆಗೂ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.

ರಾಜ್ಯ ಸರ್ಕಾರದಿಂದ ನಾಮ ನಿರ್ದೇಶನಗೊಂಡಿರುವ ನೂತನ ಏಳು ನಿರ್ದೇಶಕರನ್ನು ಸನ್ಮಾನಿಸಲಾಯಿತು. ಕಾಡಾ ಆಡಳಿತಾಧಿಕಾರಿಗಳು, ನಿರ್ದೇಶಕರು ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು