ಶಿವಮೊಗ್ಗ: ‘ಔರಾದ್ಕರ್ ವರದಿಯಿಂದ ಶೇ 20ರಷ್ಟು ಮಂದಿಗೆ ಮಾತ್ರ ವಂಚಿತರಾಗಿದ್ದಾರೆ. ಅವರಿಗೂ ವೇತನದಲ್ಲಿ ಅನುಕೂಲ ಮಾಡಿಕೊಟ್ಟಿದ್ದೇವೆ. ಔರಾದ್ಕಾರ್ ವರದಿ ಜಾರಿಗೆ ತರುವ ನಿಟ್ಟಿನಲ್ಲಿ ಚರ್ಚಿಸಲಾಗುತ್ತಿದೆ. ಔರಾದ್ಕರ್ ವರದಿ ಜಾರಿ ಮಾಡುತ್ತೇವೆ’ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹಿರಿಯ ಪೊಲೀಸ್ ಸಿಬ್ಬಂದಿಗೆ ಔರಾದ್ಕರ್ ವರದಿ ಜಾರಿಗೊಳಿಸಲು ಆಗದಿದ್ದರೂ ಅವರಿಗೆ ತುಟ್ಟಿಭತ್ಯದಲ್ಲಿ ಹೆಚ್ಚಿಗೆ ಮಾಡಲಾಗಿದೆ. ಸರ್ಕಾರ ಕ್ಲಿಷ್ಟಕರ ಪರಿಸ್ಥಿತಿಯಲ್ಲಿದೆ. ಹೀಗಾಗಿ ಶೇ 80ರಷ್ಟು ಔರಾದ್ಕರ್ ವರದಿಯನ್ನು ಜಾರಿ ಮಾಡಿದ್ದೇವೆ. ಪೊಲೀಸ್ ಹಿರಿಯ ಸಿಬ್ವಂದಿಗೆ ಇದು ಅನುಕೂಲವಾಗದಿದ್ದರೂ 2005 ರ ನಂತರ ಇಲಾಖೆಗೆ ಸೇರಿದ ಪೊಲೀಸರಿಗೆ ಇದು ಅನುಕೂಲವಾಗಿದೆ’ ಎಂದರು.

ಗಾಂಜಾ, ಕಳ್ಳತನ ಹದ್ದುಬಸ್ತಿಗೆ ಸೂಚನೆ:‘ಜಿಲ್ಲೆಯಲ್ಲಿ ಬಹಳ ವರ್ಷಗಳಿಂದ ಗಾಂಜಾ, ಕಳ್ಳತನ ಪ್ರಕರಗಳು ನಡೆಯುತ್ತಲೇ ಇವೆ. ಇಂತಹ ಕೃತ್ಯಗಳನ್ನು ಹದ್ದುಬಸ್ತಿನಲ್ಲಿ ಇಡಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಗಳೊಂದಿಗೆ ಮಾತನಾಡಿದ್ದೇನೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ವಿಶೇಷವಾಗಿ ಗಾಂಜಾ ಪ್ರಕರಣವನ್ನು ಹದ್ದುಬಸ್ತಿನಲ್ಲಿಡಬೇಕಿದೆ. ಜಿಲ್ಲೆಯಲ್ಲಿ ಹೇರಳವಾಗಿ ಗಾಂಜಾ ಬೆಳೆದು ನಿಂತಿದೆ. ಮೆಗ್ಗಾನ್ ನಲ್ಲಿ ಒಂದು ಉಪಕರಣ ಬಂದಿದೆ. ಗಾಂಜಾ ಸೇವಿಸಿ 10 ದಿನಗಳ ನಂತರವೂ ಮೂತ್ರ ಪರೀಕ್ಷೆ ನಡೆಸಿದರೆ ಅದು ಗಾಂಜಾ ಸೇವನೆಯನ್ನು ಸೂಚಿಸುತ್ತದೆ. ರಕ್ತಪರೀಕ್ಷೆಯಲ್ಲೂ ತಿಳಿಯುತ್ತದೆ. ಇದರ ಮೂಲಕ ಗಾಂಜಾ ಪ್ರಕರಣಗಳಿಗೆ ಕಡಿವಾಣ ಹಾಕಲಾಗುವುದು’ ಎಂದು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.