ಶುಕ್ರವಾರ, 2 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಡ್ಮಿಂಟನ್: ಪೃಥ್ವಿ, ಶಶಾಂಕ್ ಜೋಡಿಗೆ ಪ್ರಶಸ್ತಿ

Last Updated 10 ಜನವರಿ 2023, 5:39 IST
ಅಕ್ಷರ ಗಾತ್ರ

ಸಾಗರ: ಇಲ್ಲಿನ ಒಳಾಂಗಣ ಕ್ರೀಡಾಂಗಣದಲ್ಲಿ ಸಾಗರ ಷಟಲ್ ಬ್ಯಾಡ್ಮಿಂಟನ್ ಕ್ಲಬ್‌ ಭಾನುವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಷಟಲ್ ಬ್ಯಾಡ್ಮಿಂಟನ್ ಟೂರ್ನಿಯ ಡಬಲ್ಸ್‌ನಲ್ಲಿ ಶಿವಮೊಗ್ಗದ ಪೃಥ್ವಿ ಮತ್ತು ಶಶಾಂಕ್ ಜೋಡಿ ಪ್ರಥಮ ಸ್ಥಾನ ಪಡೆದಿದೆ.

ಫೈನಲ್ ಪಂದ್ಯದಲ್ಲಿ ಬೆಂಗಳೂರಿನ ಹೇಮಂತ್ ಗೌಡ ಮತ್ತು ಪ್ರಶಾಂತ್ ಜೋಡಿಯನ್ನು ಸೋಲಿಸಿದ ಪೃಥ್ವಿ ಮತ್ತು ಶಶಾಂಕ್ ಗೆಲುವಿನ
ನಗೆ ಬೀರಿದ್ದಾರೆ. ಕೇರಳದ ನವನೀತ್ ಮತ್ತು ಹರಿ ಜೋಡಿ ಹಾಗೂ ತುಮಕೂರಿನ ವರುಣ್ ಮತ್ತು ಲಿಖಿತ್ ಜೋಡಿ ತೃತೀಯ ಸ್ಥಾನ
ಪಡೆದಿದೆ.

45 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಬೆಂಗಳೂರಿನ ಶ್ರೀನಾಥ್ ಮತ್ತು ಅಮೋಲ್ ದೇವ್ ಜೋಡಿ ಪ್ರಥಮ, ಶಿವಮೊಗ್ಗದ ಸುಬ್ರಮಣ್ಯ ಮತ್ತು ಚರಣ್ ಜೋಡಿ ದ್ವಿತೀಯ ಸ್ಥಾನ ಪಡೆದಿದೆ.

ಶಿವಮೊಗ್ಗ ಜಿಲ್ಲಾ ಮಟ್ಟದ ಅಂತರ ತಾಲ್ಲೂಕು ವಿಭಾಗದ ಸಾಗರದ ಲಿಖಿತ್ ಹಾಗೂ ಪ್ರಮೋದ್ ಪ್ರಥಮ, ಸೊರಬದ ಪ್ರದೀಪ್ ಹಾಗೂ ಗಗನ್ ದ್ವಿತೀಯ ಸ್ಥಾನ ಪಡೆದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT