ಆನವಟ್ಟಿ: ಸಮಾಜದಲ್ಲಿ ಶಾಂತಿ, ನೆಮ್ಮದಿ, ಸೌಹಾರ್ದ ಸೇರಿದಂತೆ ಲೋಕಕಲ್ಯಾಣಕ್ಕಾಗಿ 48 ದಿನಗಳ ಕಾಲ ಮೌನ ತಪಸ್ಸು ಕೈಗೊಳ್ಳಾಗಿತ್ತು ಎಂದು ಹಿರೇಮಾಗಡಿ ವಿರಕ್ತ ಮಠದ ಚನ್ನಬಸವ ಸ್ವಾಮೀಜಿ ತಿಳಿಸಿದರು.

ಆನವಟ್ಟಿ ಸಮೀಪದ ಹಿರೇಮಾಗಡಿ ವಿರಕ್ತ ಮಠದಲ್ಲಿ ಕೈಗೊಂಡಿದ್ದ 48 ದಿನಗಳ ಮೌನ ತಪಸ್ಸು ಪೂರ್ಣಗೊಂಡ ಪ್ರಯುಕ್ತ ಹಮ್ಮಿಕೊಂಡಿದ್ದ ಮಹಾಮಂಗಳೋತ್ಸವ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

‘ಗುರುಗಳಾದ ಶಿವಮೂರ್ತಿ ಸ್ವಾಮೀಜಿ ಅವರ ಶ್ರಮದ ಫಲವಾಗಿ ಹಿರೇಮಾಗಡಿ ಮಠಕ್ಕೆ ರಾಜ್ಯದ ವಿವಿಧೆಡೆಯಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಬರುತ್ತಿದ್ದಾರೆ. ಭಕ್ತರು, ಮಠ ಹಾಗೂ ಗುರುಗಳಿಗೆ ನೀಡಿರುವಂತಹ ಸಹಕಾರವನ್ನು ನನಗೂ ನೀಡಬೇಕು. ಹಿರಿಯರ ಸಲಹೆ, ಮಾರ್ಗದರ್ಶನದಲ್ಲಿ ಸಾಮಾಜಿಕ ಕಾರ್ಯಗಳ ಜೊತೆಗೆ ಮಠ ಹಾಗೂ ಭಕ್ತರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತೇನೆ’ ಎಂದು ಹೇಳಿದರು.

ಸಾಮೂಹಿಕವಾಗಿ ಲಿಂಗಪೂಜೆ ನೆರವೇರಿಸಲಾಯಿತು. ಮಠದ ಸೇವಾಕರ್ತರನ್ನು ಸನ್ಮಾನಿಸಲಾಯಿತು. ನಂತರದಲ್ಲಿ ರಾಜಬೀದಿ ಉತ್ಸವ ನಡೆಯಿತು.

ಹಿರೇಮಾಗಡಿ ಮಠದ ಶಿವಮೂರ್ತಿ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ನೀಲಗುಂದ ಮಠದ ಚನ್ನಬಸವ ಸ್ವಾಮೀಜಿ, ಜಡೆ ಮಠದ ಸಿದ್ದವೃಷಬೇಂದ್ರ ಸ್ವಾಮೀಜಿ, ಜಡೆ ಹಿರೇಮಠದ ಘನಬಸವ ಅಮರೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಮುಖಂಡರಾದ ಕೆ.ಪಿ.ರುದ್ರಗೌಡ ಗಿಣಿವಾಲ, ಬಸವನಗೌಡ ಮಲ್ಲಾಪುರ, ಭಾರಂಗಿ ಬಸಣ್ಣ, ವಿ.ಕೆ. ಪಾಟೀಲ್ ಹಿರೇಮಾಗಡಿ, ಬಸವರಾಜ ಅಗಸನಹಳ್ಳಿ, ಶಿಕ್ಷಕರಾದ ಎಂ. ಶೆಖರಪ್ಪ, ಕೆ.ಬಿ. ಬೆನಕಪ್ಪ, ಶಿವಮೂರ್ತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.